Wednesday, March 29, 2017
Sunday, July 24, 2016
ಹುಲುಕಡಿ ಬೆಟ್ಟ ಚಾರಣ
'ಕಾವೇರಿಯಿಂದಮಾ ಗೋದಾವರಿಮಿರ್ದ ನಾಡದಾ ಕನ್ನಡದೊಳ್' ಎಂಬ ನಾಣ್ಣುಡಿಯಂತೆ ಒಂದು ಕಾಲದಲ್ಲಿ ನಮ್ಮ ಕರ್ನಾಟಕ ಕಾವೇರಿಯಿಂದ ಹಿಡಿದು ಗೋದಾವರಿಯವರೆಗೂ ಹಬ್ಬಿತ್ತು. ಅದೆಶ್ಟೋ ಬೆಟ್ಟ-ಗುಡ್ಡ, ಕಾಡು-ಕಣಿವೆ, ಗಿರಿ-ಕಂದರ, ಕೋಟೆ-ಕೊತ್ತಲಗಳಿಂದ ತುಂಬಿರುವ ನಾಡು ನಮ್ಮ ಹೆಮ್ಮೆಯ ಸುಂದರ ನಾಡು.
ಈ ಸಲ ನಮ್ಮ ಚಾರಣ-ಸುತ್ತಾಟ ತಂಡ ಯೋಜನೆ ಹಾಕಿದ್ದು ದೊಡ್ಡಬಳ್ಳಾಪುರ ತಾಲೂಕಿನ ಹುಲುಕಡಿ ಬೆಟ್ಟಕ್ಕೆ. ಶಿವಪ್ರಸಾದ್ ರವರು ಮೊದಲೇ ಹೋಗಿ ಅಲ್ಲಿನ ಸ್ಥಳೀಯರಲ್ಲಿ ವಿಚಾರಿಸಿ, ಸ್ಥಳದ ಬಗ್ಗೆ ಮಾಹಿತಿ ಕಲೆ ಹಾಕಿ, ಬೆಟ್ಟದ ಮೇಲೆ ಉಳಿದುಕೊಳ್ಳಲು ಅನುಮತಿ ಪಡೆದು, ಬೈಕು-ಕಾರುಗಳ ಪಾರ್ಕಿಂಗ್, ಭಾನುವಾರ ಬೆಳಗಿನ ತಿಂಡಿಗೆ ವ್ಯವಸ್ತೆ ಮಾಡಿದ್ದರು. ಹುಲುಕಡಿ ಬೆಟ್ಟಕ್ಕೆ ಚಾರಣ ಬರುವವರಿಗೆಲ್ಲ ಗೊರಗುಂಟೆ ಪಾಳ್ಯದ ಬಳಿ ಸೇರುವ ಹಾಗೆ ಹೇಳಿದ್ದೆವು. ಸಮಯವನ್ನು ೨:೩೦ ಗಂಟೆಗೆ ನಿಗದಿಪಡಿಸಿದ್ದರೂ ಎಲ್ಲರೂ ಬರುವ ಹೊತ್ತಿಗೆ ೩:೩೦ - ೪:೦೦ ಆಯಿತು, ಮೊದಲು ಬಂದ ಬಂದವರನ್ನು ೨-೩ ತಂಡಗಳಾಗಿ ಮುಂದೆ ಹೊರಡುವಂತೆ ಸೂಚಿಸಲಾಯಿತು. ಹೀಗೇ, ನೆಲಮಂಗಲ ವೃತ್ತದ ಬಳಿ ಬಲ ತಿರುವು ಪಡೆದು ಕನಸವಾಡಿ ದಾರಿಯ ಕಡೆಗೆ ನಮ್ಮ ಪಯಣ ಹೊರಟಿತ್ತು.ದಾರಿ ಮಧ್ಯ ಸಣ್ಣ ಸಣ್ಣ ಹನಿ ಮಳೆಯೂ ಬಂತು, ದೊಡ್ಡಬೆಳವಂಗಲದಿಂದ ಎಡ ತಿರುವು ತೆಗೆದುಕೊಂಡು ಭಕ್ತರಹಳ್ಳಿ ದಾಟಿ ಅಲ್ಲೊಂದು ತಿರುವಿನಲ್ಲಿ ಎಲ್ಲರೂ ಒಟ್ಟುಗೂಡಿದೆವು.
ಅಲ್ಲಿಂದ ಮಂದೆ ಸಾಗಿ ಬೆಟ್ಟದ ಬುಡ ತಲುಪಿದೆವು, ಎಲ್ಲ ಬೈಕು, ಕಾರುಗಳನ್ನು ಒಂದು ಕಡೆ ಸಾಲಾಗಿ ನಿಲ್ಲಿಸಿ, ಚಾರಣಕ್ಕೆ ಅಣಿಯಾದೆವು. ಬೆಟ್ಟದ ಬುಡದಲ್ಲಿ ನಿಂತು ಹುಲುಕಡಿ ಬೆಟ್ಟವನ್ನು ನೋಡಿದರೆ ಬೃಹದಾಕಾರವಾಗಿ ಕಾಣುತ್ತಿತ್ತು. ಆದರೆ ನಾವು ಹತ್ತುವುದಕ್ಕೆ ಆಯ್ಕೆ ಮಾಡಿದ್ದ ದಾರಿ ಎಲ್ಲರೂ ಬಳಸುವ ಮೆಟ್ಟಿಲುಗಳಿದ್ದ ದಾರಿ. ಇದು ಸುಲಭ ದಾರಿ. ಸ್ವಲ್ಪ ಮಳೆ ಮೋಡಗಳು ಇದ್ದವೇ ಹೊರತು ಮಳೆ ಬರುವ ಯಾವ ಮುನ್ಸೂಚನೆಯೂ ಇರಲಿಲ್ಲ.
ಎಲ್ಲರೂ ಒಂದೆಡೆ ಕೂಡಿ, ಎಲ್ಲ ವ್ಯವಸ್ತೆಗಳನ್ನು ಪರಿಶೀಲಿಸಿಕೊಂಡು ಚಾರಣ ಶುರು ಮಾಡುವ ಹೊತ್ತಿಗೆ ೬ ಗಂಟೆ ಆಗಿತ್ತು. ಎಲ್ಲರೂ ಹುಮ್ಮಸ್ಸಿನಿಂದ ಬೆಟ್ಟ ಹತ್ತಲು ಶುರು ಮಾಡಿದರು. ಮೆಟ್ಟಿಲುಗಳಿದ್ದ ಕಾರಣ ಸುಲಭವಾಗಿ ಅರ್ಧ ಬೆಟ್ಟ ಹತ್ತಿ ಮುಗಿದೇ ಹೋಯಿತು. ಮತ್ತೆ ಅಲ್ಲಲ್ಲೇ ಗುಂಪು ಗುಂಪಾಗಿ ಕುಳಿತು ಪಟ, ಸೆಲ್ಫೀ, ಹರಟೆ ಶುರು ಆಗಿತ್ತು. ಹಾನರ್ ಪೋನಿನ ವಿಶಯ ಆಗಾಗ ಬಂದು ಹೋಗುತ್ತಿತ್ತು. ಎಡ ಭಾಗದ ದೊಡ್ಡ ಬಂಡೆಯ ಮೇಲೆ ಜೇನು ಗೂಡುಗಳ ಗುಂಪೇ ಇತ್ತು. ಅರ್ಧ ಬೆಟ್ಟದ ಮೇಲೆ ನಿಂತು ನೋಡಿದರೆ, ಗಗನಸದೃಶ್ಯವಾದ, ಅಚ್ಚ ಹಸಿರು, ಸುತ್ತ ಮುತ್ತಲ ಬೆಟ್ಟಗಳು, ಹೈ ಟೆನ್ಶನ್ ತಂತಿ ಎಳೆಯಲು ಈಗ ತಾನೆ ನಿರ್ಮಾಣವಾಗುತ್ತಿರುವ ಬೃಹದಾಕಾರವಾದ ಕಂಬಗಳು ಕಂಡವು. ಮಳೆಯ ಯಾವ ಸೂಚನೆ ಇಲ್ಲದ್ದರಿಂದ ಬೇಗ ಮೇಲೆ ಜಾಗ ತಲುಪಿ ಟೆಂಟ್ ಹಾಕೋಣ ಎಂದು ಮುಂದೆ ಮುಂದೆ ಸಾಗಿದೆವು.
ಹುಲುಕಡಿ
---------------
ಮೇಲೆ ಹತ್ತುತ್ತಲೇ ಒಂದು ಸ್ವಲ್ಪ ಸಮತಟ್ಟಾದ ಜಾಗಕ್ಕೆ ಬಂದೆವು, ಅಲ್ಲಿ ಕಂಡಿದ್ದು ಬಂಡೆಗಳ ನಡುವೆ ನಿರ್ಮಿತವಾದ ಒಂದು ಕೊಳ, ಅದುವೇ ಬಿಂದು ಸರೋವರ ಅದು ೨ ಭಾಗವಾಗಿತ್ತು, ನಮ್ಮ ಜೊತೆ ಸ್ಥಳೀಯರೂ, ಆ ಬೆಟ್ಟದಲ್ಲಿರುವ ದೇವಸ್ಥಾನಗಳ ಅರ್ಚಕರೂ ಆದ ಅರುಣ್ ಇದ್ದರು. ಅವರನ್ನು ಕೇಳಿದಾಗ ಅವರು ಹೇಳಿದ್ದು ಒಂದು ಭಾಗದಲ್ಲಿ ಬಂದ ಜನರು ಸ್ನಾನ ಮಾಡಲು ಉಪಯೋಗಿಸುತ್ತಾರೆ, ಇನ್ನೊಂದು ಭಾಗ ದೇವರ ಪೂಜೆಗೆ ಮೀಸಲು ಎಂದು ಹೇಳಿದರು.
ಅಲ್ಲಿಂದ ಮೇಲಕ್ಕೆ ಇನ್ನೂ ೨೫% ಬೆಟ್ಟವಿತ್ತು, ಕತ್ತಲು ಸ್ವಲ್ಪ ಸ್ವಲ್ಪವಾಗಿ ಆವರಿಸುತ್ತಿತ್ತು. ಕೊಳದಿಂದ ಮೇಲಕ್ಕೆ ಒಂದು ದಾರಿ ಸಾಗುತ್ತದೆ.
೧) ಬಲಭಾಗದಲ್ಲಿ ಬೆಟ್ಟಕ್ಕೆ ಕಳಸವೆಂಬಂತೆ ಒಂದು ಉದ್ದನೆಯ ಬಂಡೆ ಇದೆ, ಆ ಬಂಡೆಯ ಕೆಳಗೆ ಒಂದು ಚಿಕ್ಕ ಗುಡಿ, ಅದರೊಳಗೆ ಒಂದು ಶಿವಲಿಂಗ ಮತ್ತು ಭದ್ರಕಾಳಿಯ ವಿಗ್ರಹಗಳಿದೆ. ಇಲ್ಲಿ ಅಗಸ್ತ್ಯ ಮಹಾಮುನಿಗಳು ತಪಸ್ಸು ಮಾಡಿ ಪ್ರತಿಷ್ಠಾಪಿಸಿದ ಲಿಂಗವೆಂಬ ನಂಬಿಕೆ ಇದೆ. ಆ ಶಿವಲಿಂಗವು ಕೊಂಚ ವಿಭಿನ್ನ, ಮೇಲಿನ ಬಂಡೆಯ ತದ್ರೂಪ.
೨) ಎಡಭಾಗಕ್ಕೆ ತಿರುವು ಪಡೆದು ಮೇಲೆ ಸಾಗಿದರೆ ಅಲ್ಲಿ ವೀರಭದ್ರನ ಗುಡಿ ಸಿಗುತ್ತದೆ. ಇದೇ ದಾರಿಯಲ್ಲಿ ಯಾರೋ ಪುಣ್ಯಾತ್ಮರು ಬಂಡೆಗಲ್ಲಿನ ಮೇಲೆ ಒಂದು ಗೊಂಬೆ ಚಿತ್ರ ಬರೆದು 'ಶಿವಣ್ಣ' ಎಂದು ಕೆತ್ತಿದ್ದರು, ಒಂದೆರಡು ಪಟ, ಸೆಲ್ಫಿ ತಗೊಂಡು ಮುಂದೆ ಸಾಗಿದೆವು, ಮುಂಚೆ ಹೋದವರೆಲ್ಲಾ ಕುಳಿತು ವಿಶ್ರಮಿಸಲು ಸ್ವಲ್ಪ ಜಾಗ ಸಿಕ್ಕಿತು ಎಂದು ಅಲ್ಲೇ ಠಿಕಾಣಿ ಹೂಡಿದ್ದರು. ಅಷ್ಟರಲ್ಲಿ ಟೆಂಟ್ ಹಾಕಲು ಪುಟ್ಟ ಮತ್ತು ಅರುಣ್ ಪಸಂದಾಗಿರುವ ಜಾಗ ನೋಡಿ ಬಂದಿದ್ದರು. ಎಲ್ಲ ಆ ಕಡೆ ಸಾಗಿದೆವು.
ಒಂದೊಂದಾಗಿ ಟೆಂಟ್ ಹೊಡೆಯುತ್ತಿರವಾಗಲೇ ಸಣ್ಣ ಸಣ್ಣ ಮಳೆ ಹನಿ ಶುರು ಆಯಿತು. ಅಲ್ಲಾ ಸಿವ ಈಗ ಮಳೆ ಬಂದ್ರೆ ಏನ್ ಕಥೆ ??. ತೆಗೆದುಕೊಂಡು ಹೋಗಿದ್ದ ೧೧ ಟೆಂಟ್ ಗಳಲ್ಲಿ ೮ ಹೊಡೆದಿದ್ದೆವು, ಟೆಂಟ್ ಕವರಿನೊಳಗೆ ತುಂಬಿದ್ದ ಬಿಸ್ಕೇಟು, ಕೇಕು ತೆಗೆಯುವ ಭರದಲ್ಲಿ ಯಾರೋ ಟೆಂಟ್ ಕವರ್ ಗಳನ್ನು ತೆಗೆದು ಹಾಕಿದ್ದರು. ನೋಡು ನೋಡುತ್ತಿದ್ದ ಹಾಗೆ ಮಳೆ ಜೋರಾಗಿಯೇ ಬಿಡ್ತು, ಇನ್ನೂ ೩ ಟೆಂಟ್ ಅಲ್ಲೇ ಕವರ್ ಇಲ್ಲದೇ ಚಳಿಗೆ ನಡುಗುತ್ತಿದ್ದವು, ಹೊರಳಾಡಿ ನ್ಯಾಯ ಕೇಳುತ್ತಾ ಧರಣಿ ಕುಳಿತಿದ್ದವು. ಪುಟ್ಟ ಅದನ್ನು ನೋಡಿ, ನಂಗೂ ಗಿರೀಶ್ ಗೂ ಮಂಗಳಾರತಿ ಮಾಡಿದರು. ಎಲ್ಲರೂ ಚೆಲ್ಲಾಪಿಲ್ಲಿಯಾಗಿ ಸಿಕ್ಕ ಸಿಕ್ಕ ಬಂಡೆಗಳ ಕೆಳಗೆ ಮಳೆಯಿಂದ ತಪ್ಪಿಸಿಕೊಳ್ಳಲು ಪರದಾಡುತ್ತಿದ್ದರು.
ರಾಗಿ ಗಂಜಿ with ಕಲರ್ ಕೊಡೆ
ಈ ಸಲ ನಮ್ಮ ಚಾರಣ-ಸುತ್ತಾಟ ತಂಡ ಯೋಜನೆ ಹಾಕಿದ್ದು ದೊಡ್ಡಬಳ್ಳಾಪುರ ತಾಲೂಕಿನ ಹುಲುಕಡಿ ಬೆಟ್ಟಕ್ಕೆ. ಶಿವಪ್ರಸಾದ್ ರವರು ಮೊದಲೇ ಹೋಗಿ ಅಲ್ಲಿನ ಸ್ಥಳೀಯರಲ್ಲಿ ವಿಚಾರಿಸಿ, ಸ್ಥಳದ ಬಗ್ಗೆ ಮಾಹಿತಿ ಕಲೆ ಹಾಕಿ, ಬೆಟ್ಟದ ಮೇಲೆ ಉಳಿದುಕೊಳ್ಳಲು ಅನುಮತಿ ಪಡೆದು, ಬೈಕು-ಕಾರುಗಳ ಪಾರ್ಕಿಂಗ್, ಭಾನುವಾರ ಬೆಳಗಿನ ತಿಂಡಿಗೆ ವ್ಯವಸ್ತೆ ಮಾಡಿದ್ದರು. ಹುಲುಕಡಿ ಬೆಟ್ಟಕ್ಕೆ ಚಾರಣ ಬರುವವರಿಗೆಲ್ಲ ಗೊರಗುಂಟೆ ಪಾಳ್ಯದ ಬಳಿ ಸೇರುವ ಹಾಗೆ ಹೇಳಿದ್ದೆವು. ಸಮಯವನ್ನು ೨:೩೦ ಗಂಟೆಗೆ ನಿಗದಿಪಡಿಸಿದ್ದರೂ ಎಲ್ಲರೂ ಬರುವ ಹೊತ್ತಿಗೆ ೩:೩೦ - ೪:೦೦ ಆಯಿತು, ಮೊದಲು ಬಂದ ಬಂದವರನ್ನು ೨-೩ ತಂಡಗಳಾಗಿ ಮುಂದೆ ಹೊರಡುವಂತೆ ಸೂಚಿಸಲಾಯಿತು. ಹೀಗೇ, ನೆಲಮಂಗಲ ವೃತ್ತದ ಬಳಿ ಬಲ ತಿರುವು ಪಡೆದು ಕನಸವಾಡಿ ದಾರಿಯ ಕಡೆಗೆ ನಮ್ಮ ಪಯಣ ಹೊರಟಿತ್ತು.ದಾರಿ ಮಧ್ಯ ಸಣ್ಣ ಸಣ್ಣ ಹನಿ ಮಳೆಯೂ ಬಂತು, ದೊಡ್ಡಬೆಳವಂಗಲದಿಂದ ಎಡ ತಿರುವು ತೆಗೆದುಕೊಂಡು ಭಕ್ತರಹಳ್ಳಿ ದಾಟಿ ಅಲ್ಲೊಂದು ತಿರುವಿನಲ್ಲಿ ಎಲ್ಲರೂ ಒಟ್ಟುಗೂಡಿದೆವು.
ಎಲ್ಲರೂ ಒಂದೆಡೆ ಕೂಡಿ, ಎಲ್ಲ ವ್ಯವಸ್ತೆಗಳನ್ನು ಪರಿಶೀಲಿಸಿಕೊಂಡು ಚಾರಣ ಶುರು ಮಾಡುವ ಹೊತ್ತಿಗೆ ೬ ಗಂಟೆ ಆಗಿತ್ತು. ಎಲ್ಲರೂ ಹುಮ್ಮಸ್ಸಿನಿಂದ ಬೆಟ್ಟ ಹತ್ತಲು ಶುರು ಮಾಡಿದರು. ಮೆಟ್ಟಿಲುಗಳಿದ್ದ ಕಾರಣ ಸುಲಭವಾಗಿ ಅರ್ಧ ಬೆಟ್ಟ ಹತ್ತಿ ಮುಗಿದೇ ಹೋಯಿತು. ಮತ್ತೆ ಅಲ್ಲಲ್ಲೇ ಗುಂಪು ಗುಂಪಾಗಿ ಕುಳಿತು ಪಟ, ಸೆಲ್ಫೀ, ಹರಟೆ ಶುರು ಆಗಿತ್ತು. ಹಾನರ್ ಪೋನಿನ ವಿಶಯ ಆಗಾಗ ಬಂದು ಹೋಗುತ್ತಿತ್ತು. ಎಡ ಭಾಗದ ದೊಡ್ಡ ಬಂಡೆಯ ಮೇಲೆ ಜೇನು ಗೂಡುಗಳ ಗುಂಪೇ ಇತ್ತು. ಅರ್ಧ ಬೆಟ್ಟದ ಮೇಲೆ ನಿಂತು ನೋಡಿದರೆ, ಗಗನಸದೃಶ್ಯವಾದ, ಅಚ್ಚ ಹಸಿರು, ಸುತ್ತ ಮುತ್ತಲ ಬೆಟ್ಟಗಳು, ಹೈ ಟೆನ್ಶನ್ ತಂತಿ ಎಳೆಯಲು ಈಗ ತಾನೆ ನಿರ್ಮಾಣವಾಗುತ್ತಿರುವ ಬೃಹದಾಕಾರವಾದ ಕಂಬಗಳು ಕಂಡವು. ಮಳೆಯ ಯಾವ ಸೂಚನೆ ಇಲ್ಲದ್ದರಿಂದ ಬೇಗ ಮೇಲೆ ಜಾಗ ತಲುಪಿ ಟೆಂಟ್ ಹಾಕೋಣ ಎಂದು ಮುಂದೆ ಮುಂದೆ ಸಾಗಿದೆವು.
ಹುಲುಕಡಿ
---------------
ಮೇಲೆ ಹತ್ತುತ್ತಲೇ ಒಂದು ಸ್ವಲ್ಪ ಸಮತಟ್ಟಾದ ಜಾಗಕ್ಕೆ ಬಂದೆವು, ಅಲ್ಲಿ ಕಂಡಿದ್ದು ಬಂಡೆಗಳ ನಡುವೆ ನಿರ್ಮಿತವಾದ ಒಂದು ಕೊಳ, ಅದುವೇ ಬಿಂದು ಸರೋವರ ಅದು ೨ ಭಾಗವಾಗಿತ್ತು, ನಮ್ಮ ಜೊತೆ ಸ್ಥಳೀಯರೂ, ಆ ಬೆಟ್ಟದಲ್ಲಿರುವ ದೇವಸ್ಥಾನಗಳ ಅರ್ಚಕರೂ ಆದ ಅರುಣ್ ಇದ್ದರು. ಅವರನ್ನು ಕೇಳಿದಾಗ ಅವರು ಹೇಳಿದ್ದು ಒಂದು ಭಾಗದಲ್ಲಿ ಬಂದ ಜನರು ಸ್ನಾನ ಮಾಡಲು ಉಪಯೋಗಿಸುತ್ತಾರೆ, ಇನ್ನೊಂದು ಭಾಗ ದೇವರ ಪೂಜೆಗೆ ಮೀಸಲು ಎಂದು ಹೇಳಿದರು.
ಅಲ್ಲಿಂದ ಮೇಲಕ್ಕೆ ಇನ್ನೂ ೨೫% ಬೆಟ್ಟವಿತ್ತು, ಕತ್ತಲು ಸ್ವಲ್ಪ ಸ್ವಲ್ಪವಾಗಿ ಆವರಿಸುತ್ತಿತ್ತು. ಕೊಳದಿಂದ ಮೇಲಕ್ಕೆ ಒಂದು ದಾರಿ ಸಾಗುತ್ತದೆ.
೧) ಬಲಭಾಗದಲ್ಲಿ ಬೆಟ್ಟಕ್ಕೆ ಕಳಸವೆಂಬಂತೆ ಒಂದು ಉದ್ದನೆಯ ಬಂಡೆ ಇದೆ, ಆ ಬಂಡೆಯ ಕೆಳಗೆ ಒಂದು ಚಿಕ್ಕ ಗುಡಿ, ಅದರೊಳಗೆ ಒಂದು ಶಿವಲಿಂಗ ಮತ್ತು ಭದ್ರಕಾಳಿಯ ವಿಗ್ರಹಗಳಿದೆ. ಇಲ್ಲಿ ಅಗಸ್ತ್ಯ ಮಹಾಮುನಿಗಳು ತಪಸ್ಸು ಮಾಡಿ ಪ್ರತಿಷ್ಠಾಪಿಸಿದ ಲಿಂಗವೆಂಬ ನಂಬಿಕೆ ಇದೆ. ಆ ಶಿವಲಿಂಗವು ಕೊಂಚ ವಿಭಿನ್ನ, ಮೇಲಿನ ಬಂಡೆಯ ತದ್ರೂಪ.
೨) ಎಡಭಾಗಕ್ಕೆ ತಿರುವು ಪಡೆದು ಮೇಲೆ ಸಾಗಿದರೆ ಅಲ್ಲಿ ವೀರಭದ್ರನ ಗುಡಿ ಸಿಗುತ್ತದೆ. ಇದೇ ದಾರಿಯಲ್ಲಿ ಯಾರೋ ಪುಣ್ಯಾತ್ಮರು ಬಂಡೆಗಲ್ಲಿನ ಮೇಲೆ ಒಂದು ಗೊಂಬೆ ಚಿತ್ರ ಬರೆದು 'ಶಿವಣ್ಣ' ಎಂದು ಕೆತ್ತಿದ್ದರು, ಒಂದೆರಡು ಪಟ, ಸೆಲ್ಫಿ ತಗೊಂಡು ಮುಂದೆ ಸಾಗಿದೆವು, ಮುಂಚೆ ಹೋದವರೆಲ್ಲಾ ಕುಳಿತು ವಿಶ್ರಮಿಸಲು ಸ್ವಲ್ಪ ಜಾಗ ಸಿಕ್ಕಿತು ಎಂದು ಅಲ್ಲೇ ಠಿಕಾಣಿ ಹೂಡಿದ್ದರು. ಅಷ್ಟರಲ್ಲಿ ಟೆಂಟ್ ಹಾಕಲು ಪುಟ್ಟ ಮತ್ತು ಅರುಣ್ ಪಸಂದಾಗಿರುವ ಜಾಗ ನೋಡಿ ಬಂದಿದ್ದರು. ಎಲ್ಲ ಆ ಕಡೆ ಸಾಗಿದೆವು.
ಒಂದೊಂದಾಗಿ ಟೆಂಟ್ ಹೊಡೆಯುತ್ತಿರವಾಗಲೇ ಸಣ್ಣ ಸಣ್ಣ ಮಳೆ ಹನಿ ಶುರು ಆಯಿತು. ಅಲ್ಲಾ ಸಿವ ಈಗ ಮಳೆ ಬಂದ್ರೆ ಏನ್ ಕಥೆ ??. ತೆಗೆದುಕೊಂಡು ಹೋಗಿದ್ದ ೧೧ ಟೆಂಟ್ ಗಳಲ್ಲಿ ೮ ಹೊಡೆದಿದ್ದೆವು, ಟೆಂಟ್ ಕವರಿನೊಳಗೆ ತುಂಬಿದ್ದ ಬಿಸ್ಕೇಟು, ಕೇಕು ತೆಗೆಯುವ ಭರದಲ್ಲಿ ಯಾರೋ ಟೆಂಟ್ ಕವರ್ ಗಳನ್ನು ತೆಗೆದು ಹಾಕಿದ್ದರು. ನೋಡು ನೋಡುತ್ತಿದ್ದ ಹಾಗೆ ಮಳೆ ಜೋರಾಗಿಯೇ ಬಿಡ್ತು, ಇನ್ನೂ ೩ ಟೆಂಟ್ ಅಲ್ಲೇ ಕವರ್ ಇಲ್ಲದೇ ಚಳಿಗೆ ನಡುಗುತ್ತಿದ್ದವು, ಹೊರಳಾಡಿ ನ್ಯಾಯ ಕೇಳುತ್ತಾ ಧರಣಿ ಕುಳಿತಿದ್ದವು. ಪುಟ್ಟ ಅದನ್ನು ನೋಡಿ, ನಂಗೂ ಗಿರೀಶ್ ಗೂ ಮಂಗಳಾರತಿ ಮಾಡಿದರು. ಎಲ್ಲರೂ ಚೆಲ್ಲಾಪಿಲ್ಲಿಯಾಗಿ ಸಿಕ್ಕ ಸಿಕ್ಕ ಬಂಡೆಗಳ ಕೆಳಗೆ ಮಳೆಯಿಂದ ತಪ್ಪಿಸಿಕೊಳ್ಳಲು ಪರದಾಡುತ್ತಿದ್ದರು.
ರಾಗಿ ಗಂಜಿ with ಕಲರ್ ಕೊಡೆ
---------------------------------------
ಮಳೆ ನಿಲ್ಲಬಹುದೇನೊ ಅನ್ನುವ ನಂಬಿಕೆಯಿಂದಲೇ ಒಂದೊಂದು ಕಡೆ ಕುಳಿತು ಹರಟುತ್ತಿದ್ದರು, ಜಿಟಿ ಜಿಟಿ ಮಳೆ, ಬರೋದು ಹೋಗೋದು ಮಾಡ್ತಾನೇ ಇತ್ತು. ಮಳೆ ಶುರುವಾಗುವುದಕ್ಕೆ ಮುಂಚೆಯೇ ಒಲೆ ಹಚ್ಚಿದ್ದರೂ, ಬಿದ್ದ ಮಳೆಗೆ ಇದ್ದ ಅಲ್ಪ ಸ್ವಲ್ಪ ಕಟ್ಟಿಗೆಯೂ ತೇವದ ಪಾಲಾಯ್ತು. ಪುಟ್ಟ, Organic ಮಹೇಂದ್ರ, ಕಿರಣ್, ವಿಜಯ್ ಬಹಳ ಕಷ್ಟ ಪಟ್ಟು ಊದಿ ಊದಿ ಮತ್ತೆ ಒಲೆ ಉರಿಯುವಂತೆ ಮಾಡಿದರು, ಪಟ್ಟಣಗೆರೆ ತನ್ನ ಕಲರ್ ಕೊಡೆಯಿಂದ ಒಲೆ ಮೇಲೆ ಮಳೆ ಬೀಳದ ಹಾಗೆ ಹಿಡಿದು ನಿಂತಿದ್ದ. ನೀರು ಮೊದಲೇ ಕಾದಿದ್ದರೂ ರಾಗಿ ಗಂಜಿ ಗಟ್ಟಿಯಾಗಲು ಬಹಳ ಸಮಯ ಹಿಡಿಯಿತು. ಚಾರಣದಲ್ಲಿ ಸಿಕ್ಕ ಮೊದಲ ಮಳೆಗೆ ಅದ್ಭುತವಾದ ಸ್ವಾಗತವನ್ನೇ ಕೋರಿದ್ದೆವು, 'ಮಲೆಗಳಲ್ಲಿ ಮದುಮಗಳು' ಕತೆಯಂತೆ ಆ ಸನ್ನಿವೇಶ ಭಾಸವಾಗುತ್ತಿತ್ತು. ಒಂದು ಕಡೆ ಬಿಟ್ಟೂ ಬಿಡದೆ ಸುರಿಯುತ್ತಿರುವ ಮಳೆ, ಇನ್ನೊಂದು ಕಡೆ ಒಲೆ ಉರಿಸಲು ಸಾಹಸ, ಮತ್ತೊಂದು ಕಡೆ ಟೆಂಟ್ ಒಳಗೆ ಕೂತು ಕತೆ/ಹಾಡು ಹೇಳುತ್ತಿದ್ದವರು, ಕೆಲವರು ಬಂಡೆಯ ಕೆಳಗೆ ಕೂತೇ ಸುಮಾರು ಒಂದು ಗಂಟೆಯ ಕಾಲ ಇಡೀ ಮಳೆಯನ್ನು ಆನಂದಿಸಿದವರು. ಯಾರಾದರನ್ನು ಕೂಗಬೇಕೆಂದರೆ ಜೋರಾಗಿ ಕೂಗಬೇಕಿತ್ತು ಅಶ್ಟು ಮಳೆಯ ಸದ್ದಿತ್ತು. ಹೀಗೆ ನಾನಾ ತರದ ಚಿತ್ರಣಗಳಿಗೆ ಸಾಕ್ಶಿಯಾಗಿದ್ದು ಈ ಚಾರಣ. ಸುಮಾರು ಹೊತ್ತಿನ ನಂತರ ರಾಗಿ ಗಂಜಿ ರೆಡಿ ಆಯ್ತು. ಸಕ್ಕರೆ ಸಹಿತ-ರಹಿತ ೨ ತರದನ್ನು ಅದ್ಬುತವಾಗಿ ತಯಾರಿಸಿದ್ದರು. ಎಲ್ಲರಿಗೂ ಸಾಕಾಗುವಶ್ಟು ಆಯಿತು. ಮಳೆಯ ಆರ್ಬಟ ಇನ್ನೂ ನಿಂತಿರಲಿಲ್ಲ, ನಾವು ಮೊದಲೇ plan ಮಾಡಿದ ಹಾಗೆ, ಅನಕೃ ಬರಹಗಳ ಬಗ್ಗೆ ಚರ್ಚೆ ಮತ್ತು ಅನ್ನ ಮಾಡುವುದು ಹೇಗೆ ಅನ್ನೋದು ತಲೆಯಲ್ಲಿ ಸುತ್ತಾಡುತ್ತಿತ್ತು.
ಪುಟ್ಟ ಆ ಕಡೆ ಗಂಜಿ ಮಾಡಿದ ಪಾತ್ರೆ ತೊಳೆಯಲು ಹೋದರೆ, Organic ಮತ್ತು ಕೆಲವರು ಇನ್ನೊಂದು ಬಂಡೆಯ ಕೆಳಗೆ ಒಲೆ ಹತ್ತಿಸಲು ಪ್ರಯತ್ನಿಸುತ್ತಿದ್ದರೂ ಕಟ್ಟಿಗೆ ನೆಂದಿದ್ದರಿಂದ ಯಾಕೋ ಅನುಮಾನ ಶುರು ಅಯ್ತು, Organic ಕೊಟ್ಟ ಸಲಹೆಯಂತೆ ಈ ಕಡೆ ಮೊದಲು ನೋಡಿದ್ದ ಜಾಗ ನೋಡೋಣ ಎಂದು ನಾನು, ಮಂಜು ಹೊರಟೆವು, ಯಾವ ದಾರಿಯೂ ಕಾಣುತ್ತಿಲ್ಲ, ಮಂಜು ತುಂಬಿ ಹೋಗಿದೆ, ನೆಲ ಜಿನುಗಿದೆ, ಕತ್ತಲು ಕವಿದಿದೆ, ಕೈಯಲ್ಲಿರುವ ಬೆಳಕು ಒಂದೇ ನಮ್ಮ ಕಾಲುಗಳನ್ನು ದಾರಿಯ ಕಡೆಗೆ ನಡೆಸಬೇಕಿತ್ತು. ೫ ನಿಮಿಶದ ದಾರಿಗೆ ೧೫ ನಿಮಿಶ ತೆಗೆದುಕೊಂಡೆವು. ಅಲ್ಲಿ ಹೋಗಿ ನೋಡಿದರೆ ಅಲ್ಲಿಯೂ ನೀರು ಹರಿದು ಒದ್ದೆಯಾಗಿತ್ತು, ಕುಳಿತು ಮಾತನಾಡಲು ಸಾಧ್ಯವಿರಲಿಲ್ಲ. ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಮರಳಿ ಬಂದೆವು. ಆದರೆ ನಾವು ಟೆಂಟ್ ಹಾಕಿದ್ದ ಜಾಗದಲ್ಲಿ ಏನೂ ಮಾಡಲು ಸಾಧ್ಯವಿಲ್ಲ ಎಂಬುದು ತಿಳಿದು, ಅರುಣ್ ರವರ ಸಲಹೆಯಂತೆ ಎಲ್ಲರೂ ಗುಡಿಯ ಕಡೆಗೆ ಸಾಲಾಗಿ ಹೆಜ್ಜೆ ಹಾಕಿದೆವು.
ಹುಲುಕಡಿಯಲ್ಲಿ ಅನಕೃ, ಬೀಚಿ

------------------------------------------
ಗುಡಿಯ ಒಳಗೆ ೪೫-೫೦ ಜನ ಕುಳಿತು ಮಾತನಾಡುವಶ್ಟು ಜಾಗವಿತ್ತು. ಎಲ್ಲರೂ ಸಾವಧಾನವಾಗಿ ಕುಳಿತರು. ಅನಕೃ ಬಗ್ಗೆ, ಸಾಮಾಜಿಕ ಜಾಲತಾಣದಲ್ಲಿ ಮತ್ತು ದಿನಬಳಕೆಯಲ್ಲಿ ಕನ್ನಡದ ಬಗ್ಗೆ ಮಾತು ಶುರು ಆಯ್ತು. ಅನಕೃರಿಂದ ಪ್ರಭಾವಕ್ಕೊಳಗಾದ ಬೀಚಿಯೂ ಕೂಡ ಮಧ್ಯದಲ್ಲಿ ಬಂದರು. ಶಿವಪ್ರಸಾದ್ ಹೇಳಿದ 'ಶಾಲೆಯಲ್ಲಿ ಧನಸ್ಸು ಮುರಿದ ಕತೆ' ಎಲ್ಲರಿಗೂ ಹಿಡಿಸಿತು. ಹೊರಗಿನ ಪಡಸಾಲೆಯಲ್ಲಿ ಅರುಣ್ ಅವರು ಕೊಟ್ಟ stove ಹಚ್ಚಿ ಕಿರಣ್, ನಿತ್ಯಾನಂದ್ ಮತ್ತು Organic ಅನ್ನ ಮಾಡಲು ಶುರು ಮಾಡಿದರು. ಗಡಿಬಿಡಿಯಲ್ಲಿ ಅಕ್ಕಿ ಜಾಸ್ತಿ ಹಾಕಿದ್ದರಿಂದ ಅನ್ನ ಉಕ್ಕುವ ಮಟ್ಟಕ್ಕೆ ಬಂದಾಗ ಅರ್ಧ ತೆಗೆದು ಬೇರೆ ಪಾತ್ರೆಗೆ ಹಾಕಿಟ್ಟು ಮತ್ತೆ ಅದನ್ನು ಬೇಯಿಸುವ ಕೆಲಸ ನೋಡುತ್ತಿದ್ದಾಗ, ಅಶ್ಟೊತ್ತು ಮಳೆ enjoy ಮಾಡಿದ್ದ ನನಗೆ ಇವರ ಕೆಲಸ ನೋಡಿ ಮಳೆಯಿಂದ ಸ್ವಲ್ಪ ತೊಂದರೆ ಆಗಿದ್ದು ಅರಿವಿಗೆ ಬಂತು. ಊಟ ready ಆದರೂ ಚರ್ಚೆ ಇನ್ನೂ ಮುಂದುವರೆದಿತ್ತು. 'ಅನಕೃ'ರವರಿಂದ ಶುರು ಆದ ಮಾತು ಇವತ್ತಿನ ನಿಜ ಸ್ತಿತಿಗೆ ಬಂದಿತ್ತು.
Organic ಊಟ

--------------------
ರೊಟ್ಟಿ & ಪಲ್ಯ ವನ್ನು Organic, ಚಟ್ನಿ ಪುಡಿ, ಉಪ್ಪಿನಕಾಯಿ & ಮೊಸರನ್ನು ನಿತ್ಯಾನಂದ್ ವಹಿಸಿಕೊಂಡಿದ್ದರು. ಬಹುಶಃ ಎಲ್ಲಾ Organic ಇರಬಹುದು. Miss ಆಗಿ ದೀಪಕ್ ಕೂಡ ಮೊಸರು ತಂದಿದ್ದರಿಂದ ೮ ಲೀ ಆಗಿತ್ತು. ಆಗ ತಾನೆ ready ಆದ ಬಿಸಿ ಬಿಸಿ ಅನ್ನ, ಒಟ್ಟು ಎಲ್ಲವೂ ಸೇರಿಸಿ ಮೃಶ್ಟಾನ್ನ ಭೋಜನದ ತರಹ ಆಗಿತ್ತು. ಊಟ ಮಾಡುವಾಗ ಹೊರಗೆ ಕಣ್ಣು ಹಾಯಿಸಿದರೆ ಏನೇನು ಕಾಣುತ್ತಿಲ್ಲ, 'ನಾವು ಮೋಡದೊಳಗೋ, ಮೋಡ ನಮ್ಮೊಳಗೋ' ಅನ್ನುವ ತರಹ ಪೂರ್ತಿಯಾಗಿ ಮಂಜು ಕವಿದಿದೆ. ೩ ಮೀಟರ್ ದೂರದಲ್ಲಿದ್ದವರೂ ಕಾಣುತ್ತಿಲ್ಲ.ಊಟ ಮುಗಿಸಿ ಮತ್ತೆ ನಾವೆಲ್ಲ ಟೆಂಟ್ ಕಡೆ ಹೊರಟೆವು. ಗುಡಿಯ ಒಳಗೆ ಮಲಗಲು ಒಂದಶ್ಟು ಜನ ಉಳಿದುಕೊಂಡರು. ೧೮ ರಿಂದ ಹಿಡಿದು ೪೮ ವಯಸ್ಸಿನವರೆಗೂ ಸೇರಿ ಒಟ್ಟು ೪೬ ಜನ ನಮ್ಮ ಚಾರಣದಲ್ಲಿದ್ದರು.
ಪ್ಯಾರಾಚೂಟ್ ಟೆಂಟು

-------------------------------
ಟೆಂಟ್ ಬಳಿ ಬಂದು ಯಾವ್ಯಾವ ಟೆಂಟ್ ನಲ್ಲಿ ಎಶ್ಟು ಜನರಿದ್ದಾರೆ, ಎಲ್ಲರಿಗೂ ಆಗುತ್ತಾ ಎಂದು ಒಮ್ಮೆ ಪರಿಶೀಲಿಸಿ, ನಾವು ಸ್ವಲ್ಪ ಜನ ಒಂದೆಡೆ ಸೇರಿ ಇಬ್ಬನಿ, ಚಳಿಯನ್ನು ಆನಂದಿಸುತ್ತಾ ಕುಳಿತೆವು. ಕೆಲವರು ಗುಡಿ ಒಳಗೆ ಮಲಗಿದ್ದ ಕಾರಣ, ೧೦ ಟೆಂಟ್ ಗಳೇ ಸಾಕಾದವು, ಇನ್ನೊಂದು ನೆಂದಿದ್ದ ಟೆಂಟ್ ಗೆ ಹಾಸಿಗೆಯಾಯಿತು. ಆ ಕಡೆ ಖಾಲಿ ಇದ್ದ ಟೆಂಟ್ ಒಳಗೆ ನಾನು ಮತ್ತು ಕಿರಣ್ ಮಲೆನಾಡು ಮಲಗೋಣ ಎಂದು ನೋಡಿದಾಗ, ಆ ಜಾಗ ಹೇಗಿತ್ತೆಂದರೆ ಕತ್ತಲೆಯಲ್ಲಿ ನೋಡದೆ ಒಂದು ತುದಿಯಲ್ಲಿ ಹಾಕಿದ್ದೆವು. ಕಿರಣ್ ಅದನ್ನು ನೋಡಿ, ಅಕಸ್ಮಾತ್ ಆಗಿ ಜೋರಾಗಿ ಗಾಳಿ ಬೀಸಿದರೆ ಇದು ಪ್ಯಾರಾಚೂಟ್ ತರಹ ಹಾರಿ ಹೋಗುತ್ತದೆ, ಬೆಳಗ್ಗೆ ಒಳಗೆ ಬೆಂಗಳೂರು ಸೇರುತ್ತೇವೆ ಎಂದು ನಗೆ ಬಾಂಬ್ ಸಿಡಿಸಿದಾಗ ಎಲ್ಲರ ಮುಖದಲ್ಲಿ ಮಂದಹಾಸ. ವಿಜಯ್ ಹಾಕಿದ್ದ ಟೀ-ಶರ್ಟ್ ಮೇಲೆ 'ತರವಲ್ಲ ತಗಿ ನಿನ್ನ ತಂಬೂರಿ' ಅಂತಿದ್ದನ್ನು 'ತರವಲ್ಲ ತಗಿ ನಿನ್ನ ಟಮ್ಮಿ' ಎಂದು ಹಾಸ್ಯ ಮಾಡಿದ್ದು ಇದೇ ಕಿರಣ್. ಸುಮಾರು ಹೊತ್ತಿನ ಮಾತಿನ ನಂತರ ಟೆಂಟ್ ಸೇರಿಕೊಂಡೆವು. ಎಲ್ಲ ಮಲಗಿದ್ದರೂ ಗಿರೀಶ್ ಅವರ ಟೆಂಟ್ ಒಳಗೆ ತಿಥಿ ಚಿತ್ರದ ಗಡ್ಡಪ್ಪನ ವೀಡೀಯೋ ಸದ್ದು ಮಾಡುತ್ತಿತ್ತು. ಯಾರೂ, ನಿಮ್ಮಪ್ಪ - ಸೆಂಚುರಿ ಗೌಡ, ಆಯ್ತು - ಸರಿ ಬುಡು.
ಹುಲುಕಡಿ ಮಾತು - Coffee with Guide
ಹುಲುಕಡಿ ಮಾತು - Coffee with Guide
---------------------------------------------------
ಬೆಂಗಳೂರಲ್ಲಿದ್ದಾಗ alarmನ snooze ಮಾಡಿ ಮಾಡಿ ಮಲಗುವ ನಾವು ಅಲ್ಲಿದ್ದಾಗ ಏಳಲೇ ಬೇಕಾಗುತ್ತದೆ. ಬೆಳಗ್ಗೆ ಎದ್ದು ಕಾಫಿ ಕಾಯಿಸುತ್ತಿರುವಾಗಲೇ ಸಿಂಹ entry ಕೊಟ್ಟ ಹಾಗೆ ನಮ್ಮ campಗೆ entry ಕೊಟ್ಟಿದ್ದು ಜಯಸಿಂಹ ಮತ್ತು ತಂಡ, ಬೆಳಗಿನ ಜಾವ ೪ಕ್ಕೆ ಎದ್ದು ಹುಲುಕಡಿ ಬೆಟ್ಟದ ಕಡೆಗೆ ಪಯಣ ಬೆಳೆಸಿದ್ದರು. ಕಾಫಿ ಕುಡಿಯುತ್ತಲೇ ಚಿಕ್ಕದಾಗಿ ಎಲ್ಲರ ಪರಿಚಯ ಮುಗಿಯಿತು. ಅರುಣ್ ರವರು ಹುಲುಕಡಿ ಬೆಟ್ಟದ ಬಗ್ಗೆ ಸುದೀರ್ಘವಾಗಿ ಮಾತಾಡಿದರು. ಅದರ ಇತಿಹಾಸದ ಬಗ್ಗೆ, ಭೌಗೋಳಿಕ ಪ್ರದೇಶದ ಬಗ್ಗೆ, ವೀರಭದ್ರ ಸ್ವಾಮಿಯ ಬಗ್ಗೆ, ಕೋಟೆಯ ಬಗ್ಗೆ, ಅದನ್ನಾಳಿದ ಸಾಮಂತರ ಬಗ್ಗೆ ಮಾಹಿತಿ ಕೊಟ್ಟರು. ಕೋಟೆಯ ಸುತ್ತ ಒಂದು ಸುತ್ತು ಬರುವಾಗ ಬಹಳ ವಿಶಯ ತಿಳಿಸಿಕೊಟ್ಟರು.
ನೆನಪಿನ ಕಜ್ಜಾಯ

-------------------------
ಒಬ್ಬಟ್ಟಿನ ಹಗರಣ
ಸಮಯ ಆಗಲೇ ೧೦ ದಾಟಿದ್ದರಿಂದ ಕೆಳಗಿಳಿಯಲು ಅಣಿಯಾದೆವು. ನಾವು ತೆಗೆದುಕೊಂಡು ಹೋಗಿದ್ದ ಪೇಪರ್-ಪ್ಲಾಸ್ಟಿಕ್ ಎಲ್ಲವನ್ನೂ ಒಂದು ಬ್ಯಾಗಿಗೆ ತುಂಬಿಸಿದೆವು. ಈ ಸಲ ಪೇಪರ್-ಪ್ಲಾಸ್ಟಿಕ್ ಬಳಕೆ ಕಮ್ಮಿ ಆಗಲೆಂದು ಶಿವಪ್ರಸಾದ್ ಬಾಳೆ ಎಲೆ ವ್ಯವಸ್ತೆ ಮಾಡಿದ್ದರು. ನಾವು ಅಲ್ಲಿಗೆ ಹೋದಾಗ ಆ ಜಾಗ ಹೇಗಿತ್ತೋ, ಅಲ್ಲಿಂದ ಹೊರಡುವಾಗಲೂ ಹಾಗೆಯೇ ಇತ್ತು. ಕೋತಿಗಳ ಗುಂಪು ನಾವು ಇದ್ದ ಕಡೆ ದಾಳಿ ಮಾಡಿತ್ತು, ಪುಣ್ಯಕ್ಕೆ ರಾತ್ರಿ ಇವುಗಳು ನಮಗೆ ತೊಂದರೆ ಕೊಡಲಿಲ್ಲ. ಈಗ ನಾವು ಇಳಿಯುತ್ತಿದ್ದ ದಾರಿ ಈ ಬೆಟ್ಟದ ಇನ್ನೊಂದು ದಾರಿ, ನೀರು ಹರಿದು ಜಾರುತ್ತಿದ್ದ, ಮೆಟ್ಟಿಲುಗಳಿಲ್ಲದ, ಕಡಿದಾದ, ಇಳಿಜಾರು ದಾರಿ. ಎಶ್ಟೇ ಹುಶಾರಾಗಿ ಹೆಜ್ಜೆ ಇಟ್ಟರೂ ನಾನು ಒಂದು ಕಡೆ, ಪುಟ್ಟ ಒಂದು ಕಡೆ ನೆನಪಿಗಾಗಿ ಕಜ್ಜಾಯ ತೆಗೆದುಕೊಂಡೆವು, ಗೊತ್ತಿಲ್ಲದೆ ಅದೆಶ್ಟು ಜನ ತೆಗೆದುಕೊಂಡರೋ ತಿಳಿಯದು. ಬೆಟ್ಟವನ್ನು ಸುತ್ತಿಳಿದು, ಹೊಲ, ಪೊದೆಗಳನ್ನು ದಾಟಿ ಬುಡ ತಲುಪಿದೆವು. ತಿಂಡಿಗಾಗಿ ಕಾಯುತ್ತಾ ಎಲ್ಲರೂ ಕುಳಿತಿದ್ದರು.
--------------------------
ತಿಂಡಿ ಬಂದ ನಂತರ ಎಲ್ಲರೂ ತಿಂದು ಮುಗಿಸಿದೆವು, ಅದೇ ಸಮಯಕ್ಕೆ ಆ ಕಡೆ 'ಅನ್ನ ದಾಸೋಹದ ಮಹಾಮನೆ'ಯಲ್ಲಿ ಒಬ್ಬಟ್ಟು ಮಾಡ್ತೀರೋ ವಿಶಯವನ್ನು ಯಾರೋ ಹೇಳಿದರು, ಅಲ್ಲಿ ನಾಲ್ಕಾರು ಜನ ಹೋಗಿ ಒಬ್ಬಟ್ಟು ಮಾಡುತ್ತಿದ್ದವರ ಜೊತೆ ಮಾತನಾಡುತ್ತ ಒಬ್ಬಟ್ಟಿಗಾಗಿ ಕಾಯುತ್ತಾ ನಿಂತಿದ್ದರು. ನಾನೂ ಹೋಗಿ ನೋಡಿದವನು ಒಬ್ಬಟ್ಟು ಸಿಗೋಕೆ ಸಾಧ್ಯನೇ ಇಲ್ಲ ಅಂತ ಬಂದು ಕೈ ತೊಳೆದೆ. ಅದೇ ಸಮಯಕ್ಕೆ ಇವರೆಲ್ಲರ ಕೈಯಲ್ಲಿ ಒಬ್ಬಟ್ಟು. Organic ಬಂದು ನನಗೂ ಅರ್ಧ ಒಬ್ಬಟ್ಟು ಕೊಟ್ಟರು. ಬೇರೆ ಯಾರ್ಯಾರು ಎಶ್ಟು ತಿಂದರೋ ತಿಳಿಯದು, ಇದು ಒಂದು ತರ ಹಗರಣವೇ ಆಗಿ ಹೋಯ್ತು. ಅಷ್ಟರಲ್ಲಾಗಲೇ ಜಯಸಿಂಹ ಮತ್ತು ತಂಡ ಬೆಂಗಳೂರಿನ ಕಡೆಗೆ ತೆರಳಿದ್ದರು.
ವಿಸ್ಮಯ
ವಿಸ್ಮಯ
------------
ಎಲ್ಲ ಹೊರಡುವ ವೇಳೆಗೆ ರಂಗನಾಥ್ ರವರ 'ಮಗು' ಬೈಕು ಕೈ ಕೊಟ್ಟಿತ್ತು. ರಾತ್ರಿ ಬೀಸಿದ ಗಾಳಿಗೆ ಕೆಳಗೆ ಬಿದ್ದು ಪೆಟ್ರೋಲ್ ನ ಹರಿವಿನಿಂದ ಏನೋ ಸಮಸ್ಯೆಯಾಗಿತ್ತು. ಎಲ್ಲರಿಗೂ ಬೀಳ್ಕೊಟ್ಟು ನಾವು ಹೊರಡುವಾಗ ಸಮಯ ೧ ಗಂಟೆ. ಪುಟ್ಟ, ಪಟ್ಟಣಗೆರೆ, ಕಿರಣ್ ಮತ್ತು ನಾನು ಕಡೆಯಲ್ಲಿ ಖಾಲಿ ರಸ್ತೆಯಲ್ಲಿ ಪಟ, ಸೆಲ್ಫಿ ತೆಗೆದುಕೊಂಡು ಬೆಂಗಳೂರಿನ ಕಡೆ ಹೊರಟೆವು. ಮಧ್ಯ ದಾರಿಯಲ್ಲಿ ಅಲ್ಲೆಲ್ಲೋ ಒಂದು ಕಡೆ ಗಾಡಿ ನಿಲ್ಲಿಸಿದಾಗ, ಕಿರಣ್ ಬಂದು ಕೈ ತೋರಿಸಿದರು, ಕೈಯೆಲ್ಲಾ ರಕ್ತವಾಗಿತ್ತು. ಆದರೆ ಅದು ರಕ್ತವಾಗಿರಲಿಲ್ಲ, ಸಾಗುವಾನಿ ಮರದ ಎಲೆಯನ್ನು ಉಜ್ಜಿದಾಗ ಆ ಬಣ್ಣಕ್ಕೆ ಬರುತ್ತದೆ. ಇದೂ ಒಂದು ವಿಸ್ಮಯ. ನಿಸರ್ಗದ ಚಿಕ್ಕ ಚಿಕ್ಕ ವಿಶಯಗಳಲ್ಲೂ ವಿಸ್ಮಯ ಲೋಕವೇ ಇರುತ್ತದೆ ಎಂಬ ತೇಜಸ್ವಿ ಮಾತು ಖಂಡಿತ ನಿಜ. ಮಳೆ ಬರುವ ಮುಂಚೆ ಮನೆ ಸೇರೋಣವೆಂದು ಬೇಗ ಬೇಗ ಗಾಡಿ ಚಲಿಸಿದೆವು.

Sunday, June 19, 2016
ಮಾರ್ಗಕ್ಕೆ ಕೊನೆಯಿಲ್ಲ...
*ಡಾ.ಎಂ.ಎಂ. ಕಲ್ಬುರ್ಗಿ*
ಈ ಹೆಸರು ಕೇಳಿದಾಕ್ಷಣ ಕೆಲವರ ಮನಸಲ್ಲಿ ಹುಟ್ಟೋದು, ವಿವಾದಾತ್ಮಕ ಹೇಳಿಕೆಗಳಿಂದ ಹೆಸರಾಗಿದ್ದವರು ಇವರೇ ಅಲ್ಲವಾ? ಯಾರೋ ಗುಂಡಿಟ್ಟು ಕೊಂದಿದ್ದು ಇವರನ್ನೇ ಅಲ್ಲವಾ?
ಇವರ ಬಗ್ಗೆ ಆ ರೀತಿಯ ತಪ್ಪು ಕಲ್ಪನೆ ಸೃಷ್ಟಿ ಮಾಡಿದ್ದು ಈ ರಾಷ್ಟ್ರೀಯರೆಂದು ಹೇಳಿಕೊಳ್ಳುವ ದ್ರಾವಿಡಿಗತನವೇ ಗೊತ್ತಿಲ್ಲದ, ಜನಪದವ ಅರಿಯದ ಎಡಬಿಡಂಗಿ ಅನಾಗರೀಕರು ಮತ್ತು ರಾಷ್ಟ್ರೀಯತೆಯೆಂಬ ಪಿಡುಗಿನ ಮಾಧ್ಯಮಗಳು/ವ್ಯಕ್ತಿಗಳು.
KS Parameshwar ರವರ 'ಮಾರ್ಗಕ್ಕೆ ಕೊನೆಯಿಲ್ಲ' ಎಂಬ ಸಾಕ್ಷ್ಯ ಚಿತ್ರ ನೋಡಿದ ಮೇಲೆ ಈ ಕಲ್ಪನೆ ಬದಲಾಗುವುದು ಸಹಜ. ಯಾವೊಬ್ಬ ಮಾನವನೂ ಕೂಡ 'ಕಲ್ಬುರ್ಗಿಯವರನ್ನು' ಹತ್ತಿರದಿಂದ ನೋಡಿದವನು ಅಂತಹ(?) ಕೆಲಸಕ್ಕೆ ಕೈ ಹಾಕಿರುವುದಿಲ್ಲ.
ಕಲ್ಬುರ್ಗಿ - ಕನ್ನಡಕ್ಕೆ ನೀಡಿದ ಕೊಡುಗೆ ಅಪಾರ. ಯಾವ ಧರ್ಮಗಳೂ ಇರಲಿಲ್ಲದ ಕರ್ನಾಟಕವೆಂಬ ದೇಶದಲ್ಲಿ ಧರ್ಮಗಳು ಎಲ್ಲಿಂದ ಬಂದವು. ಧರ್ಮಗಳು ಎಲ್ಲಿಂದ ಹುಟ್ಟಿದವು ಅನ್ನುವ ಅವರ ಪ್ರತಿಪಾದನೆಯೇ ಅವರ ಸಾವಿಗೆ ಕಾರಣವಾಗಿರಬಹುದೇನೋ.(???)..
ಕರ್ನಾಟಕದ ಮಠಗಳ ಪರಂಪರೆಯನ್ನು ಅರಿತವರು, ಮಠಗಳು ಇವರ ಮಾರ್ಗದರ್ಶನವನ್ನು ಬಯಸುತ್ತಿದ್ದುದು, ಮತ್ತು ಮಠ ಪರಂಪರೆಯ ಬಗ್ಗೆ ಸಾಕ್ಷ್ಯ ಚಿತ್ರವನ್ನು ಮಾಡಲು Parameshwar ಕೂಡ ಕಲ್ಬುರ್ಗಿಯವರನ್ನು ಸಂಪರ್ಕಿಸಿದ್ದು ಕಾಕತಾಳೀಯ.
ಕಲ್ಬುರ್ಗಿಯವರ ಹತ್ಯೆಯಾಗುವ ಮೊದಲೇ ಸಾಕ್ಷ್ಯ ಚಿತ್ರಕ್ಕೆ ಕೈ ಹಾಕಿದ್ದ ಪರಮೇಶ್ವರ್ ರವರ ಸಾಹಸ ಮೆಚ್ಚಬೇಕು.
ಮಾರ್ಗಕ್ಕೆ ಕೊನೆಯಿಲ್ಲ ಸಾಕ್ಷ್ಯ ಚಿತ್ರ ನೋಡಿದ ಮೇಲೆ ಎಂಥಾ ಕಟುಕನ ಮನಸೂ ಬದಲಾಗುತ್ತದೆ. ಕಲ್ಬುರ್ಗಿಯವರ ಬಗ್ಗೆ ಪ್ರೀತಿ ಹುಟ್ಟುತ್ತದೆ. ಆಧ್ಯಾತ್ಮಿಕ ವ್ಯಕ್ತಿಗಳಿಗೂ ಮಾರ್ಗದರ್ಶಿಯಾಗಿದ್ದ ಕಲ್ಬುರ್ಗಿಯವರ ಹತ್ಯೆಯನ್ನು ಬಯಸಿದ ಆ ಕಟುಕರು ನಿಜವಾಗಿಯೂ ಕನ್ನಡತನದ, ದ್ರಾವಿಡತನದ ಅಥವಾ ಮನುಷ್ಯತ್ವವಿಲ್ಲದ ಅರಿವಿಲ್ಲದವರು ಎಂತಲೇ ತಿಳಿಯಬೇಕು.
ಕಲ್ಬುರ್ಗಿ - ಖಂಡಿತವಾಗಿಯೂ ಒಂದು ಅದ್ಭುತವಾದ ಕನ್ನಡದ-ಕನ್ನಡತನದ-ದ್ರಾವಿಡತನದ-ನಾಡಭಕ್ತಿಯ-ನಮ್ಮತನದ ಒಂದು ಕಣಜ.
ನೆನ್ನೆ ಮಲ್ಲೇಶ್ವರದ MES ಕಾಲೇಜಿನಲ್ಲಿ 'ಮಾರ್ಗಕ್ಕೆ ಕೊನೆಯಿಲ್ಲ' ನೋಡಿ ಈಚೆ ಬರುವ ಹೊತ್ತಿಗೆ ಮನಸಲಿ ಮೂಡಿದ್ದು ಮೊದಲು 'ಮಾರ್ಗ' ಓದಬೇಕು.
ಹೌದ್ರೀ, ಕರ್ನಾಟಕದಲ್ಲಿ ಯಾವ ಧರ್ಮವೂ ಇರಲಿಲ್ಲ, ಇದ್ದದ್ದು ಕೆಲಸ ಮಾಡುವ ಆಧಾರದ ಮೇಲಿನ ಜಾತಿಗಳು. ಮೊಹಮ್ಮದ ಹುಟ್ಟುವ ಮುಂಚೆ ಮುಸಲ್ಮಾನ ಇರಲಿಲ್ಲ, ಕ್ರಿಸ್ತ ಹುಟ್ಟುವ ಮುಂಚೆ ಕ್ರೈಸ್ತರಿರಲಿಲ್ಲ. ಕರ್ನಾಟಕದ ಬುಡ ದ್ರಾವಿಡತನ.
ರಾಜರುಗಳಿಂದ ವಿಜ್ರಂಬಿಸುತ್ತಿದ್ದ ಕರ್ನಾಟಕ ಇಂದು ಮಂತ್ರಿಗಳಿದ್ದೂ ಹೈಕಮಾಂಡ್ ಕಾಲು ನೆಕ್ಕುವ ಅರಾಜಕತೆ ಮತ್ತು ನಾಯಕತ್ವದ ಅರಿವಿಲ್ಲದ ರಾಜಕಾರಣಿಗಳು. ಕನ್ನಡಕ್ಕೆ ಉಸಿರೆತ್ತಲಾಕಗದ ನಪುಂಸಕ ನಾಯಕರುಗಳು.
ಕಲ್ಬುರ್ಗಿ ಬದುಕಿದಿದ್ದರೆ ಕಳಸಾ-ಬಂಡೂರಿಯ ಬಗ್ಗೆ ಸೊಲ್ಲೆತ್ತುತ್ತಿದ್ದರು ಅಲ್ಲವಾ? ಉಳಿದವರೆಲ್ಲಾ ಏನಾಗಿದ್ದಾರೆ, ಬದುಕಿಯೂ ಸತ್ತಂತ್ಯಾಕೆ ನಟಿಸುತ್ತಿದ್ದಾರೆ ನಮ್ಮ ಕೇಂದ್ರ ಮಂತ್ರಿಗಳು?
ಕಲ್ಬುರ್ಗಿಯವರು ಹೇಳಿದ ಮಾತುಗಳು ಹೃದಯ ಮುಟ್ಟುವುದಂತೂ ಖಚಿತ.

'ಮನುಷ್ಯನಿಗೆ ಸಿಟ್ ಇರಬೇಕು, ಸೇಡಿರಬಾರದು'.
ಅದೆಲ್ಲಾ ಹೋಗಲಿ ಆ ಯಪ್ಪ ಒಂದು ಸಲ ಮಾತಾಡೋದ್ ನೋಡ್ರೋ ಯಪ್ಪ, ನಿಮ್ಮ ಮನಸಾಗೆ ಏನಾದ್ರೂ ಕೆಟ್ಟದು ಬರುತ್ತಾ ಅಂತ ಒಂದು ಸಲ ನೀವೇ ಯೋಚನೆ ಮಾಡ್ರಲಾ...

Sunday, June 12, 2016
ಮಾಕಳಿ ದುರ್ಗ - ಓದು, ಚಾರಣ ಮತ್ತು ಚರ್ಚೆ
ದುರ್ಗಗಳು ಯಾವಾಗಲೂ *ನಿಗೂಢ ರಹಸ್ಯಗಳು*. ಕೆಲವು ದುರ್ಗಗಳ ದಾರಿಗಳು ದುರ್ಗಮಯ. ಪ್ರತಿಯೊಂದು ದುರ್ಗವೂ ತನ್ನದೇ ಆದ ವೈಶಿಷ್ಟ್ಯ ಹೊಂದಿರುತ್ತದೆ. ಯಾವುದಾದರೂ ಊರಿಗೆ ಹೋಗುವಾಗ ದಾರಿಯಲ್ಲಿ ದೂರದಿಂದ ಕಾಣುವ ದುರ್ಗಗಳನ್ನು ನೋಡಿದಾಗ ಆ ದುರ್ಗಗಳನ್ನು ಹತ್ತುವ, ಅದರ ಬಗ್ಗೆ ತಿಳಿದುಕೊಳ್ಳವ ಆಸಕ್ತಿ ಉಂಟಾಗುವುದು ಸಹಜ.
ಅಂಥಾ ದುರ್ಗಗಳಲ್ಲಿ ಮಾಕಳಿ ದುರ್ಗವೂ ಒಂದು. ಈ ದುರ್ಗಕ್ಕೆ ದೊಡ್ಡ ಬೆಟ್ಟ ಅಂತಲೂ ಕರೆಯುತ್ತಾರೆ.ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಸೇರಿದ ದೊಡ್ಡಬಳ್ಳಾಪುರ ತಾಲೂಕಿನ ಸಾಸಲು ಹೋಬಳಿಯ ಗುಂಡಮಗೆರೆ-ಮಾಕಳಿ ಊರುಗಳ ನಡುವೆ ಇರುವ ಬೆಟ್ಟವೇ ಮಾಕಳಿ ದುರ್ಗ. ಬೆಂಗಳೂರಿನಿಂದ 55-60 ಕಿ.ಮೀ ದೂರವಷ್ಟೇ.
ಯಥಾ ಪ್ರಕಾರ ಚಾರಣದ ಜೊತೆಗೆ ಓದು ಮತ್ತು ಚರ್ಚೆಗೆ ಈ ಬಾರಿ ತೇಜಸ್ವಿಯವರ ಕಾಡಿನ ಕಥೆಗಳು -4 ರ *ಅಲ್ಲಾಭಕ್ಷಿಯ ಪುಂಡು ಕರಡಿ* ಮತ್ತು ನಾಡು-ನುಡಿ-ಕಾಡಿನ ವಿಷಯಗಳನ್ನು ಆಯ್ಕೆ ಮಾಡಿ ಒಂದು ಪೋಸ್ಟರ್ ಮಾಡಿ ಚಾರಣ-Trek/Travel, ಪೂರ್ಣ ಚಂದ್ರ ತೇಜಸ್ವಿ ಪೇಜ್ - ಗುಂಪಿನಲ್ಲಿ ಹಾಕಲಾಯಿತು. ಇದಕ್ಕೆ ಸ್ಪಂದಿಸಿದವರು 60 ಕ್ಕೂ ಹೆಚ್ಚು ಮಂದಿ. ಕೊನೆಯಲ್ಲಿ 35 ಮಂದಿಯಾದರೂ ಆಗಬಹುದು ಎಂದು 35-40 ಮಂದಿಯ ಲೆಕ್ಕದಲ್ಲಿ ಯೋಜನೆ ಹಾಕಿದೆವು. ಕೊನೆಗೆ ಈ ಚಾರಣಕ್ಕೆ ಜೊತೆಯಾದದ್ದು ಬರೋಬ್ಬರಿ 48 ಮಂದಿ.
ಈ ಮಾಕಳೀ ದುರ್ಗವು ಸಮುದ್ರ ಮಟ್ಟದಿಂದ 4500 ಅಡಿ ಎತ್ತರದಲ್ಲಿದೆ, ತುದಿ ತಲುಪಲು ಸುಮಾರು 2-2.5 ಕಿ.ಮೀ ಏರಬೇಕು.ಮೊದಲಿಗೆ ಕುರುಚಲು ಕಾಡು ನಂತರ ದಟ್ಟ ಕಾಡು, ಮತ್ತೆ ಕುರುಚಲು ಕಾಡು ಇದು ದುರ್ಗದ ಹಾದಿ. ಇದನ್ನು ದಾಟಿದ ನಂತರ ನಮಗೆ ಸಿಗುವುದೇ ಪಾಳೇಗಾರರು ಕಟ್ಟಿದ ಕೆಲವು ಸುತ್ತುಗಳ ಕೋಟೆ ಮತ್ತು ಕೋಟೆಯ ಒಳಭಾಗದಲ್ಲಿ ಕಾಡು ಮಲ್ಲೇಶ್ವರನ ದೇವಸ್ಥಾನ.
ನಮ್ಮ ಜೊತೆ ಇದ್ದ ಸ್ಥಳೀಯರನ್ನು ಮಾತಿಗೆಳೆದಾಗ 'ನಿಧಿಗಳ್ಳರು ಅಗೆದು ದೇವಸ್ಥಾನ ವಿನಾಶದ ಅಂಚಿಗೆ ಬಂದಿದೆ, ಗೋಪುರವನ್ನೇ ಹೊಡೆದುರುಳಿಸಿದ್ದಾರೆ, ಲಿಂಗವಿದ್ದ ಜಾಗವನ್ನು ಅಗೆದು ಲಿಂಗವನ್ನು ಅದೆಲ್ಲೋ ಎಸೆದಿದ್ದರು. ಹಳ್ಳಿಯವರೆಲ್ಲ ಸೇರಿ ಮತ್ತೆ ಲಿಂಗ ಪ್ರತಿಷ್ಠಾಪನೆ ಮಾಡಿಸಿದ್ದಾರೆ, ಕಾರ್ತೀಕ ಮಾಸ ಮತ್ತು ಶಿವರಾತ್ರಿಯ ದಿನ ಬಹಳ ಜನ ಇಲ್ಲಿ ಸೇರುತ್ತಾರೆ' ಎಂದು ಹೇಳಿದರು.
ಟೆಂಟ್ ಹಾಕಲು ಜಾಗ ಹುಡುಕಿ ಎಲ್ಲಾ 12 ಟೆಂಟ್ ಗಳನ್ನೂ ಹಾಕಲಾಯಿತು. ಇನ್ನೊಂದು ಕಡೆ ಹಳ್ಳಿಗರ ಸಹಾಯದಿಂದ ಕಟ್ಟಿಗೆ ಹುಡುಕಿ ಒಲೆ ಹಚ್ಚಿ ಸೂಪ್ ಮಾಡಲು ನೀರು ಕಾಯಲಿಟ್ಟರು. ಎಲ್ಲರನ್ನೂ ಒಂದೆಡೆ ಕೂರಲು ಹೇಳಿ ಮಾತು ಶುರು ಆಯಿತು. ಒಂದೆರಡು ಜನಪದ ಗೀತೆಗಳೊಂದಿಗೆ ಇತ್ತೀಚಿನ ಪ್ರಸಿದ್ದವಾದ ಹುಲಿ ಡ್ಯಾನ್ಸ್ ಮತ್ತು ತಿಥಿ ಡ್ಯಾನ್ಸ್ ಗೆ ಮಿಥುನ್ , ಶ್ರೀ ಶೈಲ, ಶಿವಾನಂದ್ ಹಾಗೂ ಇತರರು ಹೆಜ್ಜೆ ಹಾಕಿದರು. ಸೂಪ್ ರೆಡಿಯಾದಾಕ್ಷಣ ಎಲ್ಲರೂ ಸೂಪ್ ಕುಡಿದು ಮತ್ತೆ ಒಂದೆಡೆ ಕುಳಿತೆವು. ಈಗ ಚಿಕ್ಕದಾಗಿ ಎಲ್ಲರ ಪರಿಚಯ ಮತ್ತು ಬೇರೇನಾದರೂ ತಿಳಿದು ಕೊಳ್ಳುವ ವಿಷಯದ ಬಗ್ಗೆ ಚರ್ಚೆ ಶುರುವಾಯಿತು. ಇನ್ನೊಂದು ಕಡೆ ಅನ್ನ ಮಾಡಲು ಅಣಿಯಾದರು. ಈಗ ತಾನೆ ಪಿ.ಯು.ಸಿ ಮುಗಿಸಿದ ಶ್ರೀಜನ್ ನಿಂದ ಹಿಡಿದು 40 ದಾಟಿದ ರಾಜಶೇಖರ್, 56 ರ ರೇವಣ್ಣ ಸರ್ ವರೆಗೂ ಎಲ್ಲ ವಯೋಮಾನದವರಿದ್ದರು.
ರಂಗನಾಥ್ ರವರು stock photography ಬಗ್ಗೆ, ಮಿಥುನ್ ಶೆಟ್ಟಿ-ಶಿವಾನಂದ್-ವಿಜಯ್ ಮಹಾಂತೇಶ್ ರವರು ನಾಡು-ನುಡಿ-ನುಡಿಯರಿಮೆಯ ಬಗ್ಗೆ, ಶಿವಪ್ರಸಾದ್ ರವರು ತೇಜಸ್ವಿಯ ಬಗ್ಗೆ, ತಮ್ಮ ಹುಟ್ಟೂರಾದ ಬೀರೂರು ಜಂಕ್ಷನ್ ರಹಸ್ಯದ ಬಗ್ಗೆ ಒಂದೆರಡು ಮಾತುಗಳನ್ನಾಡಿದರು. ಸೋಮಶೇಖರ್ ರವರ ಬಬ್ರುವಾಹನದ ಮಿಮಿಕ್ರಿ ಎಲ್ಲರನ್ನೂ ರಂಜಿಸಿತು.
ಇದು ನಡೆಯುತ್ತಿರುವಾಗಲೇ organic ಮಹೇಂದ್ರ ಮತ್ತು 3 ಮಂದಿ ಒಬ್ಬರು ಸ್ಥಳೀಯರೊಂದಿಗೆ ಬಂದು ಸೇರಿಕೊಂಡರು. ಜೊತೆಯಲ್ಲಿ ಹಲಸಿನ ಹಣ್ಣನ್ನು ಚಾರಣದುದ್ದಕ್ಕೂ ಹೊತ್ತು ತಂದಿದ್ದರು. ಒಂದು ಟೆಂಟ್ ಕೂಡ ತಂದಿದ್ದರು, ಈಗ ನಮ್ಮ 13 ಟೆಂಟಿನ ಕ್ಯಾಂಪಿನಲ್ಲಿದ್ದ ಒಟ್ಟು ಮಂದಿ ಅರ್ಧ ಸೆಂಚುರಿ ಮೇಲೆ ಒಂದು ಸಂಖ್ಯೆ.
ಸಮಯ ಆಗಲೇ 11 ಆಗಿದ್ದರಿಂದ ಎಲ್ಲರ ಹೊಟ್ಟೆ ತಾಳ ಹಾಕುತ್ತಿತ್ತು, ಚರ್ಚೆಗೆ ವಿರಾಮ ಕೊಟ್ಟು ಊಟ ಮಾಡಿದೆವು. ಊಟದ ನಂತರ ಮತ್ತೆ ಚರ್ಚೆ ಶುರು ಮಾಡಿ ಚುಟುಕಾಗಿ ಮುಗಿಸಿ ಪುಂಡು ಕರಡಿಯ ಕಥೆ ಶುರು ಆಯಿತು.
ಶಿವಪ್ರಸಾದ್ ಪಟ್ಟಣಗೆರೆಯವರು ಕಥೆ ಓದುತ್ತಲೇ ಕಥೆಯಲ್ಲಿ ಬರುವ ಅರಸೀಕೆರೆ, ಸಕ್ಕರೆ ಪಟ್ಣ, ಅಯ್ಯನಕೆರೆಗಳ ಕಡೆಯೆಲ್ಲಾ ಸುತ್ತಾಡಿಸಿದರು. ಪುಂಡು ಕರಡಿಯು ಕಥೆಗಾರನ ಗುಂಡೇಟಿಗೆ ಬಲಿಯಾಗುವುದರ ಮೂಲಕ ಕಥೆ ಕೊನೆಯಾಗುತ್ತದೆ. ಕಿರಣ್ ಮಲೆನಾಡುರವರು ಕೆನೆತ್ ಆಂಡರ್ಸನ್ ರ ಬಗ್ಗೆ ಚೊಕ್ಕದಾಗಿ ಹೇಳಿ ಮುಗಿಸಿದರು.
ಸಮಯ 2 ಗಂಟೆಯಾದ್ದರಿಂದ ಚರ್ಚೆ-ಓದನ್ನು ಮುಗಿಸಿ ಹಲಸಿನ ಹಣ್ಣು ತಿನ್ನಲು ಕೈ ಹಾಕಿದರು. ಎಲ್ಲರಿಗೂ ಸಾಕಾಗಿ ಮಿಕ್ಕುವಷ್ಟು ತೊಳೆಗಳಿದ್ದವು. ಬೆಂಕಿ ಕಾಯಿಸಿಕೊಂಡು ಹಲಸಿನ ಹಣ್ಣು ತಿನ್ನುತ್ತಲೇ ಮಾತುಗಳು science-engg-technology ಕಡೆ ತೆರಳಿದ್ದವು. ದಟ್ಟವಾದ ಇಬ್ಬನಿ ಎಲ್ಲ ಟೆಂಟ್ ಗಳನ್ನೂ ಬಾಚಿ ತಬ್ಬಿತ್ತು, ಎಲ್ಲರೂ ಟೆಂಟ್ ಒಳಗೆ ಸೇರಿ ಕೊಂಡಾಗ ಅದಾಗಲೇ 3 ರ ಹೊತ್ತಾಗಿತ್ತು. ಬೆಳಿಗ್ಗೆ 5:30 ಕ್ಕೆ ಸೂರ್ಯೋದಯ ನೋಡುವ ತವಕದಲ್ಲಿ ಎಚ್ಚರವಾದರು ಕೆಲವರು. ಆದರೆ ಸೂರ್ಯ ಇಬ್ಬನಿ ತುಂಬಿದ ವಾತಾವರಣದಲ್ಲಿ, ಮೋಡಗಳ ಮರೆಯಲ್ಲಿ ಮೇಲೇರಿದ್ದ.
ಕೋಟೆ ಸುತ್ತ ಎಲ್ಲರೂ ಒಂದು ಸುತ್ತು ಹಾಕಿದೆವು, ಹಕ್ಕಿಗಳ ಚಿಲಿಪಿಲಿ, ನವಿಲಿನ ನಾದದ ನಡುವೆ ನಾನು & ಶಿವಾನಂದ್ ಕುರುಚಲು ಕಾಡುಗಳ ನಡುವೆ ನೋಡುತ್ತಿದ್ದಾಗ ಮೊಲ ಓಡಿ ಹೋದದ್ದು ಕಾಣಿಸಿತು. ಹಾಗೇ ಕೆಲಕಾಲ photography, ಕೋಟೆಯ ಅನಾವರಣ ಮಾಡಿದೆವು, ದುರ್ಗದ ಮೇಲಿಂದ ಬಹು ದೂರದಲ್ಲಿ ನಂದಿ ಬೆಟ್ಟ ಮತ್ತು ಸ್ಕಂದ ಗಿರಿಗಳು ಕಾಣುತ್ತವೆ, ದುರ್ಗದ ಬುಡದಲ್ಲೇ ರೈಲು ಹೋಗುವ ಹಾದಿ ಸೊಗಸಾಗಿ ಕಾಣುತ್ತದೆ.
ಕೋಟೆಯ ವಿಹಾರವನ್ನು ಮುಗಿಸಿ, ಕಾಫಿ ಮಾಡಿ ಕುಡಿದು ಟೆಂಟ್ ಗಳನ್ನು ತೆಗೆದು ಪ್ಯಾಕಿಂಗ್ ಮಾಡುವಾಗ ಗಮನಕ್ಕೆ ಬಂದಿದ್ದು, ರಾತ್ರಿ ಬೀಸಿದ ಜೋರು ಗಾಳಿಗೆ ಒಂದು ಟೆಂಟಿನ ಕವರ್ ಹಾರಿ ಹೋಗಿತ್ತು. ಹುಡುಕಿದರೂ ಸಿಗಲಿಲ್ಲ. ನಾವಿದ್ದ ಜಾಗದಲ್ಲಿ ಗುಡ್ಡೆ ಹಾಕಿದ್ದ ಎಲ್ಲ ಪ್ಲಾಸ್ಟಿಕ್, ಪೇಪರ್ ತಟ್ಟೆ-ಲೋಟಗಳನ್ನು ಕವರ್ ನಲ್ಲಿ, ಖಾಲಿ ಆಗಿದ್ದ ಎಲ್ಲ ನೀರಿನ ಬಾಟಲ್ ಗಳನ್ನು ಒಂದು ಬಳ್ಳಿಗೆ ಕಟ್ಟಿಕೊಂಡು ವಾಪಸ್ ತೆಗೆದುಕೊಂಡು ಹೊರಟೆವು.
'ನಮ್ಮ ಪಾಲಿಗೆ ಭೂಮಿ ಹಾಳಾಗುತ್ತಿದೆಯೇ ಹೊರತು ತನ್ನಷ್ಟಕ್ಕಲ್ಲ' ಎಂಬ ತೇಜಸ್ವಿ ಮಾತಿನಂತೆ ಹೋದ ಕಡೆಯೆಲ್ಲ ಪೇಪರ್-ಪ್ಲಾಸ್ಟಿಕ್ ಬಿಸಾಡಿ ಬರುವವರಿಗೆ ನಮ್ಮ ತಂಡ ತದ್ವಿರುದ್ದ. ಗಿರೀಶ್, ಸಚಿನ್, ಮಿಥುನ್ & ಶ್ರೀಶೈಲ ದುರ್ಗ ಇಳಿಯುವ ದಾರಿ ಉದ್ದಕ್ಕೂ ಅವರಿವರು ಬಿಸಾಡಿ ಹೋಗಿದ್ದ ಪ್ಲಾಸ್ಟಿಕ್-ಪೇಪರ್ ಗಳನ್ನು ಒಂದು ಕವರ್ ನಲ್ಲಿ ತುಂಬಿಸುತ್ತಾ ಹೊರಟರು, ಕೆಳಗಿಳಿಯುವಷ್ಟರಲ್ಲಿ ಆ ಕವರ್ ತುಂಬಿ ಹೋಗಿತ್ತು.
ದುರ್ಗ ಇಳಿಯುವಾಗ ಸಿಗುವ ಹಾಲು ಬಾವಿ, ನೀರು ಬಾವಿ ಕೊಳಗಳು ಕಂಡವು. ಅಲ್ಲೊಂದು ಕಡೆ ಬಂಡೆಯ ಮೇಲೆ ಹನುಮನ ದೊಣೆ ಎಂದು ಕರೆಯಲ್ಪಡುವ ಸಣ್ಣ ಗುಂಡಿ ಇದೆ, ಈ ದೊಣೆಯಲ್ಲಿ ಬೇಸಿಗೆ, ಬರಗಾಲದಲ್ಲೂ ಸಹ ನೀರು ಇರುತ್ತದಂತೆ. ಇದರ ಒಳಗೆ ಒಂದು ಸಣ್ಣ ಹಾವಿನ ಮರಿಯೂ ಕಾಣಿಸಿತು. ಅದಕ್ಕೆ ತೊಂದರೆ ಮಾಡಬಾರದೆಂದು ಅಲ್ಲಿಂದ ಮುಂದಕ್ಕೆ ಹೊರಟೆವು. ಇಳಿಯುವಾಗ ನಾವು ಬರುತ್ತಿದ್ದ ದಾರಿ ಬೇರೆ, ಇದು ಕಡಿದಾದ ದಾರಿ ಮತ್ತು ಜಿನುಗುವ ನೀರಿನಿಂದಾಗಿ ಜಾರುವ ಅಪಾಯಕಾರಿ ದಾರಿ.
ಈಗ ನಾವು ದುರ್ಗವನ್ನು ಒಂದು ಕಡೆ ಹತ್ತಿ, ಮತ್ತೊಂದು ಕಡೆ ಇಳಿದು ಅದರ ಸುತ್ತು ಬಂದು ಬುಡದಲ್ಲಿದ್ದ ಕೆರೆ ತಲುಪಿದ್ದೆವು. ಸ್ನಾನ ಮಾಡ ಬಯಸಿದವರು ನೀರಿಗಿಳಿದರು, ಈಜು ಬಾರದ ಮತ್ತು ಭಾನುವಾರ ಸ್ನಾನ ಮಾಡುವ ಅಭ್ಯಾಸವಿಲ್ಲದವರು! ದಡದಲ್ಲಿ ಮರದ ನೆರಳಲ್ಲಿ ಕುಳಿತು ವಿಶ್ರಮಿಸಿದರು.
ಮಾಕಳಿ ಸ್ಕೂಲಿನ ಹತ್ತಿರ ತಿಂಡಿ ರೆಡಿ ಇತ್ತು, ಪಟ್ಟಣಗೆರೆಯವರು ತೇಜಸ್ವಿಯವರ ಪೂರ್ತಿ ಬರಹಗಳ ಕೈಪಿಡಿಯೊಂದನ್ನು ಅಲ್ಲಿದ್ದವರೆಲ್ಲರಿಗೂ ವಿತರಿಸಿದರು.

ಈ ಮಾಕಳಿ ದುರ್ಗಕ್ಕೆ ಚಾರಣ ಹೋಗೋಣ ಎಂದು *ಚಾರಣ-Trek/Travel* ತಂಡ ಯೋಜನೆ ಹಾಕಿತು. ಅದೇ ಸಮಯಕ್ಕೆ ಸರಿಯಾಗಿ ಸಿಕ್ಕಿದ್ದು ಮಾಕಳಿ ಊರಿನಿಂದ ಸ್ವಲ್ಪ ದೂರದ ಊರಿನಲ್ಲಿ ಸರ್ಕಾರಿ ಶಾಲೆಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ತೇಜಸ್ವಿ ಅಭಿಮಾನಿ ಶಿವಪ್ರಸಾದ್. ಚಾರಣದ ಪೂರ್ತಿ ಯೋಜನೆಯನ್ನು ಹಾಕಿದ್ದು ಪುಟ್ಟ, ಶಿವಪ್ರಸಾದ್,ಶಿವಣ್ಣ, ಗಿರೀಶ್ ಮತ್ತು ಮಿಥುನ್, ಶಿವಪ್ರಸಾದ್ ರವರು ಮಾಕಳಿ ಊರಿಗೆ ತೆರಳಿ ಅದರ ಬಗ್ಗೆ ವಿಷಯ ತಿಳಿದುಕೊಂಡರು ಮತ್ತು ಚಾರಣಕ್ಕೆ ತಕ್ಕ ವ್ಯವಸ್ಥೆ ಮಾಡಿದರು. ನಂತರ ಮಾಕಳಿ ದುರ್ಗ ತಲುಪುವ ದಾರಿಗಳನ್ನು ನೋಡಿದಾಗ, 2 ದಾರಿಗಳಿರುವುದು ತಿಳಿಯಿತು. ಒಂದು ರೈಲ್ವೇ ಟ್ರಾಕ್ ದಾರಿ, ಇನ್ನೊಂದು ಮಾಕಳಿ ಊರಿನಿಂದ, ನಾವು ಪರಿಗಣಿಸಿದ್ದು ಎರಡನೇ ದಾರಿ.
ಯಥಾ ಪ್ರಕಾರ ಚಾರಣದ ಜೊತೆಗೆ ಓದು ಮತ್ತು ಚರ್ಚೆಗೆ ಈ ಬಾರಿ ತೇಜಸ್ವಿಯವರ ಕಾಡಿನ ಕಥೆಗಳು -4 ರ *ಅಲ್ಲಾಭಕ್ಷಿಯ ಪುಂಡು ಕರಡಿ* ಮತ್ತು ನಾಡು-ನುಡಿ-ಕಾಡಿನ ವಿಷಯಗಳನ್ನು ಆಯ್ಕೆ ಮಾಡಿ ಒಂದು ಪೋಸ್ಟರ್ ಮಾಡಿ ಚಾರಣ-Trek/Travel, ಪೂರ್ಣ ಚಂದ್ರ ತೇಜಸ್ವಿ ಪೇಜ್ - ಗುಂಪಿನಲ್ಲಿ ಹಾಕಲಾಯಿತು. ಇದಕ್ಕೆ ಸ್ಪಂದಿಸಿದವರು 60 ಕ್ಕೂ ಹೆಚ್ಚು ಮಂದಿ. ಕೊನೆಯಲ್ಲಿ 35 ಮಂದಿಯಾದರೂ ಆಗಬಹುದು ಎಂದು 35-40 ಮಂದಿಯ ಲೆಕ್ಕದಲ್ಲಿ ಯೋಜನೆ ಹಾಕಿದೆವು. ಕೊನೆಗೆ ಈ ಚಾರಣಕ್ಕೆ ಜೊತೆಯಾದದ್ದು ಬರೋಬ್ಬರಿ 48 ಮಂದಿ.
ಚಾರಣದ ಸಿದ್ದತೆಯಲ್ಲಿದ್ದಾಗ ಶಿವಪ್ರಸಾದ್ ರವರು ಮಾಕಳಿ ಜನರನ್ನು ಸಂಪರ್ಕಿಸಿ 3 ಜನ ಸ್ಥಳೀಯರನ್ನು ಮಾರ್ಗದರ್ಶಕರಾಗಿ ಬರಲು ಒಪ್ಪಿಸಿದ್ದರು ಮತ್ತು ಶಾಲೆಯ ಬಳಿ ಗಾಡಿಗಳನ್ನು ನಿಲ್ಲಿಸಲು ಅನುಮತಿ ಪಡೆದಿದ್ದರು.
ಪುಟ್ಟ ಅವರ ಮನೆಯಿಂದ ಚಿಕನ್ ಮಸಾಲ, ಗಿರೀಶ್ ರವರು ಚಪಾತಿ, Organic ಮಹೇಂದ್ರ ರವರು ಅಕ್ಕಿ ರೊಟ್ಟಿ, ಗುರುರಾಜ್ ರವರು Veg curry ವ್ಯವಸ್ಥೆ ವಹಿಸಿಕೊಂಡರು. ಪೇಪರ್ ತಟ್ಟೆ-ಲೋಟ, ಸೂಪ್ ಪೌಡರ್, ಕಾಪಿ ಪೌಡರ್, ಹಾಲು-ಮೊಸರು, ಉಪ್ಪಿನಕಾಯಿ ಮತ್ತು ಅಡುಗೆಗೆ ಬೇಕಾದ ಅಗತ್ಯ ಸಾಮಗ್ರಿಗಳ ಶಾಪಿಂಗ್ ಮಾಡಲು ಶಿವಾನಂದ್ - ಶ್ರೀ ಶೈಲ, ಟೆಂಟ್ ಗೆ ರಂಗನಾಥ್-ದೇವರಾಜ್ ವಹಿಸಿಕೊಂಡರು.
ಚಾರಣಕ್ಕೆ 2 ದಿನ ಇದ್ದಾಗ ಟೆಂಟ್ ಕೊಡಬೇಕಿದ್ದವರು ಎಲ್ಲ 100 ಟೆಂಟ್ ಗಳನ್ನು ಮೋಟಾರ್ ಬೈಕಿನವರ ಕ್ಯಾಂಪ್ ಒಂದಕ್ಕೆ ಕಳಿಸುತ್ತಿದ್ದೇವೆಂದು ಕೈ ಎತ್ತಿದರು. ನಮ್ಮ ಹತ್ತಿರ ಇರೋದೆ 2 ಟೆಂಟ್ !!! ಕೊನೆಗೆ ಅವರೇ ಹುಡುಕಿಕೊಟ್ಟ ಕಡೆ ಟೆಂಟ್ ವ್ಯವಸ್ಥೆ ಆಯಿತು. ಮಿಥುನ್-ಗಿರೀಶ್ ವಿಜಯನಗರದಿಂದ, ರಂಗನಾಥ್-ದೇವರಾಜ್ BTM ನಿಂದ ಟೆಂಟ್ ತೆಗೆದುಕೊಂಡು ಹೋಗುವ ಯೋಜನೆಯಾಯಿತು.

ಮಳೆ ಶುರುವಾಗುವ ಮುನ್ನ 3 ಗಂಟೆಗೆ ಎಲ್ಲರೂ ಹೆಬ್ಬಾಳದಿಂದ ಹೊರಟು 5 ಕ್ಕೆ ಮಾಕಳಿ ತಲುಪುವ ಯೋಜನೆ ಇತ್ತು. 15-20 ಮಂದಿ 3:30 ರ ವೇಳೆಗೆ ಹೆಬ್ಬಾಳ ತಲುಪಿದ್ದೆವು. ಕೆಲವರು ಟ್ರಾಫಿಕ್ ಸಲುವಾಗಿ ತಡವಾದದ್ದರಿಂದ 3 ತಂಡಗಳಾಗಿ ಹೊರಡುವ ಯೋಜನೆ ಹಾಕಿ 10-12 ಮಂದಿ ಗುಂಪಿನಲ್ಲಿ ಹೆಬ್ಬಾಳ ಬಿಟ್ಟು ದೊಡ್ಡಬಳ್ಳಾಪುರ ದಾರಿ ಹಿಡಿದೆವು. ಮುಂದೆ ಹೋದವರೆಲ್ಲರೂ ಗುಂಡಮಗೆರೆ ತಿರುವಿನಲ್ಲಿ ಕಾಯುವಂತೆ ಸೂಚಿಸಲಾಯಿತು.
*ಜುಗಾರಿ ಕ್ರಾಸ್* ನಂತ ಆ ತಿರುವಿನಲ್ಲಿ ಒಂದು ಟೀ ಅಂಗಡಿ, ಚಿಕನ್ ಅಂಗಡಿ ಇದೆ. ಎಲ್ಲರೂ 3 ಲೀಟರ್ ತರಬೇಕೆಂಬ ನಿಯಮಕ್ಕೆ ಬದ್ದರಾಗಿ ಬೇಕಾದಷ್ಟು ನೀರಿನ ಬಾಟಲ್ ಗಳನ್ನು ಹಲವರು ಅಲ್ಲಿಯೇ ಕೊಂಡುಕೊಂಡರು!!"
ಗುಂಡಮಗೆರೆ ಕ್ರಾಸ್ ನಿಂದ ಎಲ್ಲರೂ ಸಾಲಾಗಿ ಮಾಕಳಿ ಕಡೆ ಹೊರಟೆವು. 13-14 ಬೈಕು, 3- ಕಾರು, 1-ಜೀಪ್ ನಲ್ಲಿ ಬೆಟ್ಟ-ಗುಡ್ಡಗಳನ್ನೇರಿ ಇಳಿಯುವ ಸಣ್ಣ ಘಾಟಿ ತರದ ರಸ್ಥೆಯಲ್ಲಿ, ಮಳೆ ಬಂದು ಮೈದುಂಬಿದ ಹಸಿರು ಹಾದಿಯಲ್ಲಿ ಅತಿ ಹೆಚ್ಚು ಶಬ್ದ ಮಾಡದೇ ಸಾಲು ಸಾಲಾಗಿ ಮಾಕಳಿ ಕಡೆಗೆ ಗತಕಾಲದ ಇತಿಹಾಸದ ಕೋಟೆಯ ಕಡೆಗೆ ಆನೆ, ಒಂಟೆ, ಕುದುರೆಗಳಲ್ಲಿ ಸೈನಿಕರಂತೆ ಸಾಗಿದ್ದವು,ಅಬ್ಬಬ್ಬಾ ದೊಡ್ಡಬಳ್ಳಾಪುರದಲ್ಲಿ ಚಿಕ್ಕ ಮಲೆನಾಡೇ ಇದ, ಅಷ್ಟೊಂದು ಸುಂದರವಾದ ಕಾಡು ಅದು, ನಿಜಕ್ಕೂ ನಾವೇನಾದರು ರೈಲ್ವೆ ಟ್ರಾಕ್ ಮೇಲೆ ದುರ್ಗದ ಕಡೆ ಹೊಗಿದ್ದರೆ ಇದನ್ನು ಮಿಸ್ ಮಾಡುತ್ತಿದ್ದೆವು.
ಗುಂಡಮಗೆರೆ ಊರೊಳಗೆ ಇಳಿ ಸಂಜೆ 7 ಗಂಟೆಯಲ್ಲಿ ಚಾರಣಿಗರ ಮೆರವಣಿಗೆ ಕಂಡು ಜನ ತಬ್ಬಿಬ್ಬಾದರು. ಮಾಕಳಿ ತಲುಪಿದ ನಂತರ ಶಿವಪ್ರಸಾದ್ ರವರು ಹೇಳಿದಂತೆ ಸ್ಕೂಲ್ ಬಳಿ ಗಾಡಿಗಳನ್ನು ನಿಲ್ಲಿಸಿ ಇಬ್ಬರು ಮಾರ್ಗದರ್ಶಕರೊಂದಿಗೆ ದುರ್ಗದ ಕಡೆ ಸಾಗಿದೆವು. ಸಾಲಾಗಿ ದುರ್ಗ ಹತ್ತುತ್ತಿದ್ದ ನಮ್ಮ ಸಾಲು ಯಾವುದೋ ಜಾತ್ರೆಗೆ ಹೊರಟ ಜನಜಂಗುಳಿಯಂತಿತ್ತು.
*ಜುಗಾರಿ ಕ್ರಾಸ್* ನಂತ ಆ ತಿರುವಿನಲ್ಲಿ ಒಂದು ಟೀ ಅಂಗಡಿ, ಚಿಕನ್ ಅಂಗಡಿ ಇದೆ. ಎಲ್ಲರೂ 3 ಲೀಟರ್ ತರಬೇಕೆಂಬ ನಿಯಮಕ್ಕೆ ಬದ್ದರಾಗಿ ಬೇಕಾದಷ್ಟು ನೀರಿನ ಬಾಟಲ್ ಗಳನ್ನು ಹಲವರು ಅಲ್ಲಿಯೇ ಕೊಂಡುಕೊಂಡರು!!"
ಗುಂಡಮಗೆರೆ ಕ್ರಾಸ್ ನಿಂದ ಎಲ್ಲರೂ ಸಾಲಾಗಿ ಮಾಕಳಿ ಕಡೆ ಹೊರಟೆವು. 13-14 ಬೈಕು, 3- ಕಾರು, 1-ಜೀಪ್ ನಲ್ಲಿ ಬೆಟ್ಟ-ಗುಡ್ಡಗಳನ್ನೇರಿ ಇಳಿಯುವ ಸಣ್ಣ ಘಾಟಿ ತರದ ರಸ್ಥೆಯಲ್ಲಿ, ಮಳೆ ಬಂದು ಮೈದುಂಬಿದ ಹಸಿರು ಹಾದಿಯಲ್ಲಿ ಅತಿ ಹೆಚ್ಚು ಶಬ್ದ ಮಾಡದೇ ಸಾಲು ಸಾಲಾಗಿ ಮಾಕಳಿ ಕಡೆಗೆ ಗತಕಾಲದ ಇತಿಹಾಸದ ಕೋಟೆಯ ಕಡೆಗೆ ಆನೆ, ಒಂಟೆ, ಕುದುರೆಗಳಲ್ಲಿ ಸೈನಿಕರಂತೆ ಸಾಗಿದ್ದವು,ಅಬ್ಬಬ್ಬಾ ದೊಡ್ಡಬಳ್ಳಾಪುರದಲ್ಲಿ ಚಿಕ್ಕ ಮಲೆನಾಡೇ ಇದ, ಅಷ್ಟೊಂದು ಸುಂದರವಾದ ಕಾಡು ಅದು, ನಿಜಕ್ಕೂ ನಾವೇನಾದರು ರೈಲ್ವೆ ಟ್ರಾಕ್ ಮೇಲೆ ದುರ್ಗದ ಕಡೆ ಹೊಗಿದ್ದರೆ ಇದನ್ನು ಮಿಸ್ ಮಾಡುತ್ತಿದ್ದೆವು.
ಗುಂಡಮಗೆರೆ ಊರೊಳಗೆ ಇಳಿ ಸಂಜೆ 7 ಗಂಟೆಯಲ್ಲಿ ಚಾರಣಿಗರ ಮೆರವಣಿಗೆ ಕಂಡು ಜನ ತಬ್ಬಿಬ್ಬಾದರು. ಮಾಕಳಿ ತಲುಪಿದ ನಂತರ ಶಿವಪ್ರಸಾದ್ ರವರು ಹೇಳಿದಂತೆ ಸ್ಕೂಲ್ ಬಳಿ ಗಾಡಿಗಳನ್ನು ನಿಲ್ಲಿಸಿ ಇಬ್ಬರು ಮಾರ್ಗದರ್ಶಕರೊಂದಿಗೆ ದುರ್ಗದ ಕಡೆ ಸಾಗಿದೆವು. ಸಾಲಾಗಿ ದುರ್ಗ ಹತ್ತುತ್ತಿದ್ದ ನಮ್ಮ ಸಾಲು ಯಾವುದೋ ಜಾತ್ರೆಗೆ ಹೊರಟ ಜನಜಂಗುಳಿಯಂತಿತ್ತು.
ಈ ಮಾಕಳೀ ದುರ್ಗವು ಸಮುದ್ರ ಮಟ್ಟದಿಂದ 4500 ಅಡಿ ಎತ್ತರದಲ್ಲಿದೆ, ತುದಿ ತಲುಪಲು ಸುಮಾರು 2-2.5 ಕಿ.ಮೀ ಏರಬೇಕು.ಮೊದಲಿಗೆ ಕುರುಚಲು ಕಾಡು ನಂತರ ದಟ್ಟ ಕಾಡು, ಮತ್ತೆ ಕುರುಚಲು ಕಾಡು ಇದು ದುರ್ಗದ ಹಾದಿ. ಇದನ್ನು ದಾಟಿದ ನಂತರ ನಮಗೆ ಸಿಗುವುದೇ ಪಾಳೇಗಾರರು ಕಟ್ಟಿದ ಕೆಲವು ಸುತ್ತುಗಳ ಕೋಟೆ ಮತ್ತು ಕೋಟೆಯ ಒಳಭಾಗದಲ್ಲಿ ಕಾಡು ಮಲ್ಲೇಶ್ವರನ ದೇವಸ್ಥಾನ.
ನಮ್ಮ ಜೊತೆ ಇದ್ದ ಸ್ಥಳೀಯರನ್ನು ಮಾತಿಗೆಳೆದಾಗ 'ನಿಧಿಗಳ್ಳರು ಅಗೆದು ದೇವಸ್ಥಾನ ವಿನಾಶದ ಅಂಚಿಗೆ ಬಂದಿದೆ, ಗೋಪುರವನ್ನೇ ಹೊಡೆದುರುಳಿಸಿದ್ದಾರೆ, ಲಿಂಗವಿದ್ದ ಜಾಗವನ್ನು ಅಗೆದು ಲಿಂಗವನ್ನು ಅದೆಲ್ಲೋ ಎಸೆದಿದ್ದರು. ಹಳ್ಳಿಯವರೆಲ್ಲ ಸೇರಿ ಮತ್ತೆ ಲಿಂಗ ಪ್ರತಿಷ್ಠಾಪನೆ ಮಾಡಿಸಿದ್ದಾರೆ, ಕಾರ್ತೀಕ ಮಾಸ ಮತ್ತು ಶಿವರಾತ್ರಿಯ ದಿನ ಬಹಳ ಜನ ಇಲ್ಲಿ ಸೇರುತ್ತಾರೆ' ಎಂದು ಹೇಳಿದರು.
ಟೆಂಟ್ ಹಾಕಲು ಜಾಗ ಹುಡುಕಿ ಎಲ್ಲಾ 12 ಟೆಂಟ್ ಗಳನ್ನೂ ಹಾಕಲಾಯಿತು. ಇನ್ನೊಂದು ಕಡೆ ಹಳ್ಳಿಗರ ಸಹಾಯದಿಂದ ಕಟ್ಟಿಗೆ ಹುಡುಕಿ ಒಲೆ ಹಚ್ಚಿ ಸೂಪ್ ಮಾಡಲು ನೀರು ಕಾಯಲಿಟ್ಟರು. ಎಲ್ಲರನ್ನೂ ಒಂದೆಡೆ ಕೂರಲು ಹೇಳಿ ಮಾತು ಶುರು ಆಯಿತು. ಒಂದೆರಡು ಜನಪದ ಗೀತೆಗಳೊಂದಿಗೆ ಇತ್ತೀಚಿನ ಪ್ರಸಿದ್ದವಾದ ಹುಲಿ ಡ್ಯಾನ್ಸ್ ಮತ್ತು ತಿಥಿ ಡ್ಯಾನ್ಸ್ ಗೆ ಮಿಥುನ್ , ಶ್ರೀ ಶೈಲ, ಶಿವಾನಂದ್ ಹಾಗೂ ಇತರರು ಹೆಜ್ಜೆ ಹಾಕಿದರು. ಸೂಪ್ ರೆಡಿಯಾದಾಕ್ಷಣ ಎಲ್ಲರೂ ಸೂಪ್ ಕುಡಿದು ಮತ್ತೆ ಒಂದೆಡೆ ಕುಳಿತೆವು. ಈಗ ಚಿಕ್ಕದಾಗಿ ಎಲ್ಲರ ಪರಿಚಯ ಮತ್ತು ಬೇರೇನಾದರೂ ತಿಳಿದು ಕೊಳ್ಳುವ ವಿಷಯದ ಬಗ್ಗೆ ಚರ್ಚೆ ಶುರುವಾಯಿತು. ಇನ್ನೊಂದು ಕಡೆ ಅನ್ನ ಮಾಡಲು ಅಣಿಯಾದರು. ಈಗ ತಾನೆ ಪಿ.ಯು.ಸಿ ಮುಗಿಸಿದ ಶ್ರೀಜನ್ ನಿಂದ ಹಿಡಿದು 40 ದಾಟಿದ ರಾಜಶೇಖರ್, 56 ರ ರೇವಣ್ಣ ಸರ್ ವರೆಗೂ ಎಲ್ಲ ವಯೋಮಾನದವರಿದ್ದರು.
ರಂಗನಾಥ್ ರವರು stock photography ಬಗ್ಗೆ, ಮಿಥುನ್ ಶೆಟ್ಟಿ-ಶಿವಾನಂದ್-ವಿಜಯ್ ಮಹಾಂತೇಶ್ ರವರು ನಾಡು-ನುಡಿ-ನುಡಿಯರಿಮೆಯ ಬಗ್ಗೆ, ಶಿವಪ್ರಸಾದ್ ರವರು ತೇಜಸ್ವಿಯ ಬಗ್ಗೆ, ತಮ್ಮ ಹುಟ್ಟೂರಾದ ಬೀರೂರು ಜಂಕ್ಷನ್ ರಹಸ್ಯದ ಬಗ್ಗೆ ಒಂದೆರಡು ಮಾತುಗಳನ್ನಾಡಿದರು. ಸೋಮಶೇಖರ್ ರವರ ಬಬ್ರುವಾಹನದ ಮಿಮಿಕ್ರಿ ಎಲ್ಲರನ್ನೂ ರಂಜಿಸಿತು.
ಇದು ನಡೆಯುತ್ತಿರುವಾಗಲೇ organic ಮಹೇಂದ್ರ ಮತ್ತು 3 ಮಂದಿ ಒಬ್ಬರು ಸ್ಥಳೀಯರೊಂದಿಗೆ ಬಂದು ಸೇರಿಕೊಂಡರು. ಜೊತೆಯಲ್ಲಿ ಹಲಸಿನ ಹಣ್ಣನ್ನು ಚಾರಣದುದ್ದಕ್ಕೂ ಹೊತ್ತು ತಂದಿದ್ದರು. ಒಂದು ಟೆಂಟ್ ಕೂಡ ತಂದಿದ್ದರು, ಈಗ ನಮ್ಮ 13 ಟೆಂಟಿನ ಕ್ಯಾಂಪಿನಲ್ಲಿದ್ದ ಒಟ್ಟು ಮಂದಿ ಅರ್ಧ ಸೆಂಚುರಿ ಮೇಲೆ ಒಂದು ಸಂಖ್ಯೆ.
ಸಮಯ ಆಗಲೇ 11 ಆಗಿದ್ದರಿಂದ ಎಲ್ಲರ ಹೊಟ್ಟೆ ತಾಳ ಹಾಕುತ್ತಿತ್ತು, ಚರ್ಚೆಗೆ ವಿರಾಮ ಕೊಟ್ಟು ಊಟ ಮಾಡಿದೆವು. ಊಟದ ನಂತರ ಮತ್ತೆ ಚರ್ಚೆ ಶುರು ಮಾಡಿ ಚುಟುಕಾಗಿ ಮುಗಿಸಿ ಪುಂಡು ಕರಡಿಯ ಕಥೆ ಶುರು ಆಯಿತು.
ಶಿವಪ್ರಸಾದ್ ಪಟ್ಟಣಗೆರೆಯವರು ಕಥೆ ಓದುತ್ತಲೇ ಕಥೆಯಲ್ಲಿ ಬರುವ ಅರಸೀಕೆರೆ, ಸಕ್ಕರೆ ಪಟ್ಣ, ಅಯ್ಯನಕೆರೆಗಳ ಕಡೆಯೆಲ್ಲಾ ಸುತ್ತಾಡಿಸಿದರು. ಪುಂಡು ಕರಡಿಯು ಕಥೆಗಾರನ ಗುಂಡೇಟಿಗೆ ಬಲಿಯಾಗುವುದರ ಮೂಲಕ ಕಥೆ ಕೊನೆಯಾಗುತ್ತದೆ. ಕಿರಣ್ ಮಲೆನಾಡುರವರು ಕೆನೆತ್ ಆಂಡರ್ಸನ್ ರ ಬಗ್ಗೆ ಚೊಕ್ಕದಾಗಿ ಹೇಳಿ ಮುಗಿಸಿದರು.
ಸಮಯ 2 ಗಂಟೆಯಾದ್ದರಿಂದ ಚರ್ಚೆ-ಓದನ್ನು ಮುಗಿಸಿ ಹಲಸಿನ ಹಣ್ಣು ತಿನ್ನಲು ಕೈ ಹಾಕಿದರು. ಎಲ್ಲರಿಗೂ ಸಾಕಾಗಿ ಮಿಕ್ಕುವಷ್ಟು ತೊಳೆಗಳಿದ್ದವು. ಬೆಂಕಿ ಕಾಯಿಸಿಕೊಂಡು ಹಲಸಿನ ಹಣ್ಣು ತಿನ್ನುತ್ತಲೇ ಮಾತುಗಳು science-engg-technology ಕಡೆ ತೆರಳಿದ್ದವು. ದಟ್ಟವಾದ ಇಬ್ಬನಿ ಎಲ್ಲ ಟೆಂಟ್ ಗಳನ್ನೂ ಬಾಚಿ ತಬ್ಬಿತ್ತು, ಎಲ್ಲರೂ ಟೆಂಟ್ ಒಳಗೆ ಸೇರಿ ಕೊಂಡಾಗ ಅದಾಗಲೇ 3 ರ ಹೊತ್ತಾಗಿತ್ತು. ಬೆಳಿಗ್ಗೆ 5:30 ಕ್ಕೆ ಸೂರ್ಯೋದಯ ನೋಡುವ ತವಕದಲ್ಲಿ ಎಚ್ಚರವಾದರು ಕೆಲವರು. ಆದರೆ ಸೂರ್ಯ ಇಬ್ಬನಿ ತುಂಬಿದ ವಾತಾವರಣದಲ್ಲಿ, ಮೋಡಗಳ ಮರೆಯಲ್ಲಿ ಮೇಲೇರಿದ್ದ.
ಕೋಟೆ ಸುತ್ತ ಎಲ್ಲರೂ ಒಂದು ಸುತ್ತು ಹಾಕಿದೆವು, ಹಕ್ಕಿಗಳ ಚಿಲಿಪಿಲಿ, ನವಿಲಿನ ನಾದದ ನಡುವೆ ನಾನು & ಶಿವಾನಂದ್ ಕುರುಚಲು ಕಾಡುಗಳ ನಡುವೆ ನೋಡುತ್ತಿದ್ದಾಗ ಮೊಲ ಓಡಿ ಹೋದದ್ದು ಕಾಣಿಸಿತು. ಹಾಗೇ ಕೆಲಕಾಲ photography, ಕೋಟೆಯ ಅನಾವರಣ ಮಾಡಿದೆವು, ದುರ್ಗದ ಮೇಲಿಂದ ಬಹು ದೂರದಲ್ಲಿ ನಂದಿ ಬೆಟ್ಟ ಮತ್ತು ಸ್ಕಂದ ಗಿರಿಗಳು ಕಾಣುತ್ತವೆ, ದುರ್ಗದ ಬುಡದಲ್ಲೇ ರೈಲು ಹೋಗುವ ಹಾದಿ ಸೊಗಸಾಗಿ ಕಾಣುತ್ತದೆ.
ಕೋಟೆಯ ವಿಹಾರವನ್ನು ಮುಗಿಸಿ, ಕಾಫಿ ಮಾಡಿ ಕುಡಿದು ಟೆಂಟ್ ಗಳನ್ನು ತೆಗೆದು ಪ್ಯಾಕಿಂಗ್ ಮಾಡುವಾಗ ಗಮನಕ್ಕೆ ಬಂದಿದ್ದು, ರಾತ್ರಿ ಬೀಸಿದ ಜೋರು ಗಾಳಿಗೆ ಒಂದು ಟೆಂಟಿನ ಕವರ್ ಹಾರಿ ಹೋಗಿತ್ತು. ಹುಡುಕಿದರೂ ಸಿಗಲಿಲ್ಲ. ನಾವಿದ್ದ ಜಾಗದಲ್ಲಿ ಗುಡ್ಡೆ ಹಾಕಿದ್ದ ಎಲ್ಲ ಪ್ಲಾಸ್ಟಿಕ್, ಪೇಪರ್ ತಟ್ಟೆ-ಲೋಟಗಳನ್ನು ಕವರ್ ನಲ್ಲಿ, ಖಾಲಿ ಆಗಿದ್ದ ಎಲ್ಲ ನೀರಿನ ಬಾಟಲ್ ಗಳನ್ನು ಒಂದು ಬಳ್ಳಿಗೆ ಕಟ್ಟಿಕೊಂಡು ವಾಪಸ್ ತೆಗೆದುಕೊಂಡು ಹೊರಟೆವು.
'ನಮ್ಮ ಪಾಲಿಗೆ ಭೂಮಿ ಹಾಳಾಗುತ್ತಿದೆಯೇ ಹೊರತು ತನ್ನಷ್ಟಕ್ಕಲ್ಲ' ಎಂಬ ತೇಜಸ್ವಿ ಮಾತಿನಂತೆ ಹೋದ ಕಡೆಯೆಲ್ಲ ಪೇಪರ್-ಪ್ಲಾಸ್ಟಿಕ್ ಬಿಸಾಡಿ ಬರುವವರಿಗೆ ನಮ್ಮ ತಂಡ ತದ್ವಿರುದ್ದ. ಗಿರೀಶ್, ಸಚಿನ್, ಮಿಥುನ್ & ಶ್ರೀಶೈಲ ದುರ್ಗ ಇಳಿಯುವ ದಾರಿ ಉದ್ದಕ್ಕೂ ಅವರಿವರು ಬಿಸಾಡಿ ಹೋಗಿದ್ದ ಪ್ಲಾಸ್ಟಿಕ್-ಪೇಪರ್ ಗಳನ್ನು ಒಂದು ಕವರ್ ನಲ್ಲಿ ತುಂಬಿಸುತ್ತಾ ಹೊರಟರು, ಕೆಳಗಿಳಿಯುವಷ್ಟರಲ್ಲಿ ಆ ಕವರ್ ತುಂಬಿ ಹೋಗಿತ್ತು.
ದುರ್ಗ ಇಳಿಯುವಾಗ ಸಿಗುವ ಹಾಲು ಬಾವಿ, ನೀರು ಬಾವಿ ಕೊಳಗಳು ಕಂಡವು. ಅಲ್ಲೊಂದು ಕಡೆ ಬಂಡೆಯ ಮೇಲೆ ಹನುಮನ ದೊಣೆ ಎಂದು ಕರೆಯಲ್ಪಡುವ ಸಣ್ಣ ಗುಂಡಿ ಇದೆ, ಈ ದೊಣೆಯಲ್ಲಿ ಬೇಸಿಗೆ, ಬರಗಾಲದಲ್ಲೂ ಸಹ ನೀರು ಇರುತ್ತದಂತೆ. ಇದರ ಒಳಗೆ ಒಂದು ಸಣ್ಣ ಹಾವಿನ ಮರಿಯೂ ಕಾಣಿಸಿತು. ಅದಕ್ಕೆ ತೊಂದರೆ ಮಾಡಬಾರದೆಂದು ಅಲ್ಲಿಂದ ಮುಂದಕ್ಕೆ ಹೊರಟೆವು. ಇಳಿಯುವಾಗ ನಾವು ಬರುತ್ತಿದ್ದ ದಾರಿ ಬೇರೆ, ಇದು ಕಡಿದಾದ ದಾರಿ ಮತ್ತು ಜಿನುಗುವ ನೀರಿನಿಂದಾಗಿ ಜಾರುವ ಅಪಾಯಕಾರಿ ದಾರಿ.
ಈಗ ನಾವು ದುರ್ಗವನ್ನು ಒಂದು ಕಡೆ ಹತ್ತಿ, ಮತ್ತೊಂದು ಕಡೆ ಇಳಿದು ಅದರ ಸುತ್ತು ಬಂದು ಬುಡದಲ್ಲಿದ್ದ ಕೆರೆ ತಲುಪಿದ್ದೆವು. ಸ್ನಾನ ಮಾಡ ಬಯಸಿದವರು ನೀರಿಗಿಳಿದರು, ಈಜು ಬಾರದ ಮತ್ತು ಭಾನುವಾರ ಸ್ನಾನ ಮಾಡುವ ಅಭ್ಯಾಸವಿಲ್ಲದವರು! ದಡದಲ್ಲಿ ಮರದ ನೆರಳಲ್ಲಿ ಕುಳಿತು ವಿಶ್ರಮಿಸಿದರು.
ಮಾಕಳಿ ಸ್ಕೂಲಿನ ಹತ್ತಿರ ತಿಂಡಿ ರೆಡಿ ಇತ್ತು, ಪಟ್ಟಣಗೆರೆಯವರು ತೇಜಸ್ವಿಯವರ ಪೂರ್ತಿ ಬರಹಗಳ ಕೈಪಿಡಿಯೊಂದನ್ನು ಅಲ್ಲಿದ್ದವರೆಲ್ಲರಿಗೂ ವಿತರಿಸಿದರು.
ಮಳೆ ಬರುವ ಮುಂಚೆಯೇ ಬೆಂಗಳೂರು ಸೇರೋಣವೆಂದು ಎಲ್ಲರೂ ಉದ್ಯಾನ ನಗರಿಯ ಕಡೆಗೆ ಗಾಡಿ ತಿರುಗಿಸಿದೆವು.
ಅಕಸ್ಮಾತ್ ನಾವು ದುರ್ಗದ ಮೇಲಿದ್ದಾಗ ಜೋರು ಮುಂಗಾರು ಮಳೆಯೇನಾದರೂ ಬಂದಿದ್ದರೆ, ಆ 51 ಜನರನ್ನು ಮಾಕಳಿ ದುರ್ಗದ ಕಾಡು ಮಲ್ಲೇಶ್ವರನೇ ಕಾಪಾಡಬೇಕಾಗಿತ್ತು.

*ಜೈ ಮಾಕಳಿ ಕಾಡು ಮಲ್ಲೇಶ್ವರ*
Sunday, April 24, 2016
ತೇಜಸ್ವಿ ನೆನಪಲ್ಲಿ - ಚನ್ನರಾಯನ ದುರ್ಗದಲ್ಲಿ...
ತೇಜಸ್ವಿ ಎಂಬ ಹೆಸರೇ ಒಂದು ರೋಮಾಂಚನ. April-5-2016 ಕ್ಕೆ ತೇಜಸ್ವಿ ದೈಹಿಕವಾಗಿ ಕಣ್ಮರೆಯಾಗಿ ಸರಿಯಾಗಿ 9 ವರ್ಷಗಳು.
ತೇಜಸ್ವಿಗೆ ಮರುಳಾಗಿ ಚಾರಣ, ಸುತ್ತಾಟಗಳನ್ನು ಒಗ್ಗೂಡಿಸಿಕೊಂಡ ಯುವಕರು, ಫೇಸ್ಬುಕ್ನಲ್ಲಿ ಪರಿಚಯವಾಗಿ ಜೊತೆಯಾಗಿ ಸುತ್ತುವ ಹವ್ಯಾಸ ಬೆಳೆಸಿಕೊಂಡವರು, ತೇಜಸ್ವಿ ನೆನಪಲ್ಲಿ ಒಂದು ಚಾರಣ ಮತ್ತು ತೇಜಸ್ವಿಯವರ ಹೊಸ ವಿಚಾರಗಳು(20 ವರ್ಷಗಳ ಹಿಂದೆಯೇ ಅವಲೋಕನವಾದ ವಿಚಾರಗಳು) ಪುಸ್ತಕದ ಚರ್ಚೆ ಮಾಡೋಣ ಎಂದು ಯೋಜನೆ ರೂಪಿಸಿದವರು ಪುಟ್ಟ ಹೊನ್ನೇಗೌಡರು ಮತ್ತು ಶಿವಾನಂದ ಗುಂಡಾನವರ.
ಪೂರ್ಣ ಚಂದ್ರ ತೇಜಸ್ವಿಯವರ ಕಾರ್ಯಕ್ರಮವಾದ್ದರಿಂದ ಹುಣ್ಣಿಮೆಯ ಹಿಂದೆ ಮುಂದೆಯೇ ಕಾರ್ಯಕ್ರಮದ ಯೋಜನೆ ರೂಪಿಸಿ ಫೇಸ್ಬುಕ್ ಪೇಜ್ ಮತ್ತು ಗುಂಪಿನಲ್ಲಿ ಹಾಕಿದ ಮೇಲೆ ಆಸಕ್ತಿ ತೋರಿಸಿದವರು 40-50 ಮಂದಿ. ಕೊನೆಗೆ ಒಟ್ಟುಗೂಡಿ ಜೊತೆಯಾದವರು ಬರೋಬ್ಬರಿ 30 ಮಂದಿ.
ಸಾಣೆಕಲ್ಲಿಗೆ ಹಾಕಿ ಸಾಣೆ ಹಿಡಿಯುತ್ತಿದ್ದ ನನ್ನ ಮ್ಯಾನೇಜರ್ ನಿಂದ ಹೇಗೋ ತಪ್ಪಿಸಿಕೊಳ್ಳಬೇಕು ಅಂತ ಇದ್ದವನಿಗೆ ಎಲ್ಲಾದರೂ ಹೋಗು carry your laptop along with you ಅನ್ನುವ ಡೈಲಾಗ್ ಗೆ ಜಗ್ಗೇಶ್ ಸ್ಟೈಲ್ನಲ್ಲಿ ಹಾವಾದ್ರೂ ಕಚ್ಚಬಾರ್ದಾ ಚೇಳಾದ್ರೂ ಕುಟುಕಬಾರ್ದಾ ಅನ್ನೋ ಹಿಡಿ ಶಾಪ ಹಾಕ್ಕೊಂಡು ಬೆನ್ನು ನೋವು ಬಂದರೂ ಸರಿ ತಗೊಂಡೇ ಹೋಗೋಣ ಅಂತ ಡಿಸೈಡ್ ಮಾಡಿ ಶ್ರೀ ಶೈಲ ಸ್ವಲ್ಪ ಲೇಟಾಗಿ ಬಾ ಅಂತ ಫೋನಾಯಿಸಿದೆ.
ಎಲ್ಲರೂ ಗೊರಗುಂಟೆ ಪಾಳ್ಯದ ಬಳಿ 2 ಗಂಟೆಗೆ ಸೇರುವ ಪ್ಲಾನ್ ಇದ್ದರೂ ಸ್ವಲ್ಪ ಉಲ್ಟಾ ಮಾಡಿ ಶ್ರೀ ಶೈಲ ಮತ್ತು ನಾನು BTM ನಿಂದ ಸರಿಯಾಗಿ 1:20 PM ಗ ಜಾಗ ಖಾಲಿ ಮಾಡಿ ಸಿಲ್ಕ್ ಬೋರ್ಡ್ ಹತ್ತಿರ X-Dog's Tent ನಲ್ಲಿ 4 ಜನದ 2 tent ಅನ್ನು rent ಗೆ ಎತ್ತಾಕಿಕೊಂಡು ಶ್ರೀ ನ ಕೈಯಲ್ಲಿ 2 Tent , 1 ಬ್ಯಾಗ್ ಕೊಟ್ಟು ಹೊರಡುವ ಅಂದಾಗ ಉಸಿರೇ ಇಲ್ಲ ! ಹೀಗಾಗಿ Nice Road ನಲ್ಲಿ ಹೋಗಿ BIEC ಹತ್ತಿರ ಸೇರುವ ಪ್ಲಾನ್ ಮಾಡಿದೆವು.
ಬನ್ನೇರುಘಟ್ಟ ರಸ್ತೆಯ 8 km peak traffic ಮುಗಿಸಿ ಅಂತೂ Nice Road Toll ಹತ್ತಿರ ಬಂದಾಗ Toll ಕೊಡಬೇಡಿ ನಾನು ಮಾತನಾಡುತ್ತೇನೆ ಅಂತ ಶ್ರೀ ಹೇಳಿದ. ಯಾವುದೋ ಒಂದು ಹಳ್ಳಿ ಹೆಸರು ಹೇಳಿದಾಕ್ಷಣ toll ನವ ಹಿಂದು ಮುಂದು ನೋಡದೆ ಕೈ ಸನ್ನೆ ಮಾಡಿದ, ಸೀದಾ ಗಾಡಿ ಬಿಟ್ಟ ನಾವು ಎಲ್ಲಿಯೂ ನಿಲ್ಲಿಸಲಿಲ್ಲ ಕಾರಣ ಲೇಟಾದರೆ ಪುಟ್ಟ ಹೊನ್ನೇ ಗೌಡರು ಕತ್ತಿ ಹಿಡಿದು ನಿಲ್ಲುತ್ತಾರೆ.
Nice Road ನ Exit Toll ನಲ್ಲಿ ಒಂದು ಮಸ್ತ್ ಕಾಮಿಡಿ ಸೀನ್!!
Security ಯವ ಶ್ರೀ ಹೇಳಿದ ಹಳ್ಳಿಯ ಹೆಸರಿನ ID Card ಕೇಳಿದ. ಮೊದಲೇ ನಂಗೆ ಹಳ್ಳಿಯ ಹೆಸರಾಗಲೀ ಅದರ ಹಿಂದಿನ ಕಥೆಯಾಗಲೀ ಗೊತ್ತಿಲ್ಲದ ಕಾರಣ ಸುಮ್ಮನೆ ಪು.ಹೊ ಗೌಡರಿಗೆ ಪೋನಾಯಿಸಿದೆ. ಅವರೂ ಇನ್ನೂ ಗೊರಗುಂಟೆ ಪಾಳ್ಯದಿಂದ ಈಗ ಹೊರಡುತ್ತಿದ್ದೇವೆ ಎಂದರು. ಅಷ್ಟರಲ್ಲಿ ನಮ್ಮ ಶ್ರೀ ಶ್ರೀ ಗಳು security ಗೆ ಒಂದು ಆವಾಜ್ ಹಾಕಿದ್ದರು. ಅಲ್ಲಿಂದ ಹೊರಟೆವು, ಯಾಕೋ ಯಪ್ಪ ಈ ರಗಳೆ ಅಂದರೆ 'ರೀ ಬಿಡ್ರೀ ಈ ನನ್ನ ಮಕ್ಕಳಿಗೆ ಯಾಕೆ ರೊಕ್ಕ ಕೊಡಬೇಕು' ಅನ್ನೋ ಪ್ರತ್ಯುತ್ತರ.
ನೆಲಮಂಗಲ Toll ನಲ್ಲಿ ಊಟ ಮಾಡೋಣ ಅಂತ ನಿಲ್ಲಿಸಿದಾಗ ಎಲ್ಲರೂ ಬಂದು ಸೇರಿದರು. ನಿಲ್ಲಲಾರದಷ್ಟು ಬಿಸಿಲಿನ ಝಳವಿದ್ದ ಕಾರಣ ಅವರವರು ಮುಂದೆ ಹೋಗ್ತಾ ಇರಲಿ ಕೊರಟಗೆರೆಯಲ್ಲಿ ಒಟ್ಟು ಸೇರುವ ಪ್ಲಾನ್ ಆಯಿತು.
ಶ್ರೀ ಯ ಹತ್ತಿರ ಆ ಹಳ್ಳಿಯ ಬಗ್ಗೆ ಕೇಳಿದಾಗ ಗೊತ್ತಾಗಿದ್ದು ಅವನಿಗೂ ಸರಿಯಾದ ಹೆಸರು ಗೊತ್ತಿಲ್ಲ ಅಂತ :-) ನಾನಂತೂ ROFL...
ನಾನು, ಶ್ರೀ ದಾಬಸ್ ಪೇಟೆ ಆದ ನಂತರ ದಾರಿ ಮಧ್ಯ ಸಿಕ್ಕ ಅಡಕೆ-ತೆಂಗಿನ ತೋಟದ ನೆರಳಲ್ಲಿ ಸ್ವಲ್ಪ ಸುಧಾರಿಸಿ ಗಾಡಿ ಹತ್ತಿದೆವು. ಅಲ್ಲಿಂದ ಮುಂದೆ ಗೊರವನಹಳ್ಳಿಯ ದಾರಿಗೆ ಮುಂಚೆ ಕಬ್ಬಿನ ಹಾಲು ಕುಡಿದು ಕೊರಟಗೆರೆ ತಲುಪಿದೆವು.
ಅಲ್ಲಿ ಎಲ್ಲರೂ ಜೊತೆಗೂಡಿ ಚನ್ನರಾಯನ ದುರ್ಗದ ಹಾದಿ ಹಿಡಿದೆವು. ಕೊರಟಗೆರೆಯಿಂದ ಮಧುಗಿರಿಯ ದಾರಿಯಲ್ಲಿ ತುಂಬಾಡಿ ಗ್ರಾಮದ ನಂತರ ಎಡಭಾಗಕ್ಕೆ ಸಿದ್ದರಬೆಟ್ಟದ ಕಮಾನು ಸಿಗುತ್ತದೆ. ಅದೇ ದಾರಿಯಲ್ಲಿ ಹೋಗಿ ಬಲಕ್ಕೆ ತಿರುಗಿದರೆ ಕೆಲವೇ ಕಿ.ಮೀ ದೂರದಲ್ಲಿ ಚ.ರಾ ದುರ್ಗ ಸಿಗುತ್ತದೆ.
ಆಶ್ಚರ್ಯವೆಂದರೆ ಚಿಕ್ಕಂದಿನಿಂದ ಇದುವರೆಗೂ ಸಿದ್ದರ ಬೆಟ್ಟಕ್ಕೆ ಸುಮಾರು 7-8 ಬಾರಿಗಿಂತಲೂ ಹೆಚ್ಚು ಹೋಗಿರಬಹುದು.
ಸಿದ್ದರ ಬೆಟ್ಟ ಸಿದ್ದ ಪುರುಷರ ತಪೋ ಭೂಮಿ, ಅದೆಷ್ಟೋ ಗಿಡಮೂಲಿಕೆಗಳ ತಾಣ, ಹಾಗಾಗಿ ಇದೊಂದು ಪವಿತ್ರ ಸ್ಥಳ.
ಎಂಜಿನಿಯರಿಂಗ್ ದಿನಗಳಲ್ಲಿ ಅಲ್ಲೆಲ್ಲಾ ಬೈಕ್ ನಲ್ಲೇ ಸುತ್ತಾಡಿದ್ದರೂ ಚ.ರಾ ದುರ್ಗದ ಬಗ್ಗೆ ತಿಳಿದೇ ಇರಲಿಲ್ಲ.
ನನ್ನ ಜೊತೆಗಿದ್ದ ಸಹೋದ್ಯೋಗಿಯೊಬ್ಬಳು ನಾನು ತುಮಕೂರು ಜಿಲ್ಲೆಯವ ಅಂತ ಚ.ರಾ ದುರ್ಗದ ಬಗ್ಗೆ ವರ್ಷದ ಹಿಂದೆ ನನ್ನನ್ನು ಕೇಳಿದ್ದಾಗ ಗೂಗಲ್ ಮಾಡಿದ್ದೆ.
ಬಂಗಾರದ ಜಿಂಕೆ, ಏಳು ಸುತ್ತಿನ ಕೋಟೆ ಚಿತ್ರಗಳ ಚಿತ್ರೀಕರಣ ನಡೆದಿರುವುದು ಇಲ್ಲೇ ಎಂದು ಹುತ್ರಿದುರ್ಗಕ್ಕೆ ಹೋದಾಗ ನಮ್ಮ ಶಿವಣ್ಣ ಹೇಳಿದ್ದರು.
'ಒಲುಮೆ ಸಿರಿಯಾ ಕಂಡು' ಎಂಬ ಗುನುಗುಡುವ ಸಾಂಗ್ ನಲ್ಲಿ ವಿಷ್ಣುವರ್ಧನ್-ಭಾರತಿ ಡುಯೆಟ್ ಸಾಂಗ್ ಒಂದೊಳ್ಳೆ ರೊಮ್ಯಾಂಟಿಕ್ ಚಿತ್ರಣ.
ಚ.ರಾ ದುರ್ಗ ತಲುಪಿದ ನಂತರ ಗಾಡಿಗಳೆಲ್ಲವನ್ನು ಪಾರ್ಕ್ ಮಾಡಲು ಪು.ಹೊ.ಗೌಡರು ಎಲ್ಲವನ್ನೂ ಗೊತ್ತು ಪಡಿಸಿದ್ದರು. ಸುಮಾರು 5- 5:30 ರ ಹೊತ್ತಿಗೆ ತಲುಪಿದ ನಾವು ಎಲ್ಲ ಗಾಡಿಗಳನ್ನು ನಿಲ್ಲಿಸಿ , ಖಾಲಿ ಆಗಿದ್ದ ಬಾಟಲ್ ಗಳಿಗೆ ನೀರು ತುಂಬಿಸಿ, ದುರ್ಗ ಹತ್ತಲು ಅಣಿಯಾದೆವು.
ಮುಂದಿನ ಕಥೆ ಭವಾನಿ ಶಂಕರ (ಜಯಸಿಂಹ ಆರ್ ಮೈಲನಹಳ್ಳಿ) && ಪುಟ್ಟ ಹೊನ್ನೇ ಗೌಡ ರವರ ಬರಹದಲ್ಲಿ 11 ಮೇ 2016 ರಂದು ಪ್ರಜಾವಾಣಿಯಲ್ಲಿ ಮೂಡಿ ಬಂದಿದೆ...

Saturday, March 12, 2016
ಕಿರಗೂರಿನ ಗಯ್ಯಾಳಿಗಳು
- ಚಿತ್ರ ಶುರು ಆಗೋದೆ ಗೊತ್ತಾಗೊಲ್ಲ, ಕಾರಣ ಎಂದಿನಂತೆ ಬ್ಯಾನರ್, ಹೀರೋ, ಹೀರೋಯಿನ್ ಗಳ ಎಂಟ್ರಿ ಸದ್ದಿಲ್ಲ. ಸೈಲೆಂಟ್ ಆಗಿ ಹೆಸರು ತೋರಿಸಿ ಮುಗಿದು ಹೋಗುತ್ತದೆ. ಮೋಡ, ಹಸಿರು ತೋರಿಸಿ ಕೆಳಗಿಳಿಯುವ ಕ್ಯಾಮೆರಾ ಸೀದಾ ಕೆರೆ ಹತ್ತಿರ ಬಟ್ಟೆ ತೊಳೆಯುತ್ತಿರುವ ಗಯ್ಯಾಳಿಗಳ ಮಾತುಕತೆಯಿಂದ ಶುರು ಅಗುತ್ತದೆ.
ರಾಗಿ ತೂರುತ್ತಿದ್ದ ಗಯ್ಯಾಳಿಯೊಬ್ಬಳ ಸೆರಗು ಹಾರಿಸಿ ಇಬ್ಬರು ಗಯ್ಯಾಳಿಗಳ ಜಗಳ, ಹೊಡೆದಾಟಕ್ಕೆ ಕಾರಣವಾಗುವುದು ಬುಮ್ ಎಂದು ಬೀಸುವ ಬಿರುಗಾಳಿ.ಬಿರುಗಾಳಿ ಬೀಸಿದ ವೇಗಕ್ಕೆ ಅದೇಗೆ ಸೆರಗು ಹಾರಿತು ಅನ್ನುವುದೇ ಇನ್ನೊಬ್ಬ ಗಯ್ಯಾಳಿಯ ನಗು,ದೊಡ್ದ ಹೊಡೆದಾಟಕ್ಕೆ ಕಾರಣವಾಗುತ್ತದೆ, ಇದೇ ಈ ಚಿತ್ರದ ಗಯ್ಯಾಳಿಗಳಿಬ್ಬರ ನಡುವೆ ನಡೆಯುವ ಮೆಘಾ ಫೈಟ್.
ಮತ್ತೊಂದು ಕಡೆ, ಬೀಸಿದ ಬಿರುಗಾಳಿಗೆ ಬಿದ್ದ ಮರ ಕಡಿಯಲು ನಡೆಯುವ ಚೌಕಾಸಿ.ಮರ ಬೀಳುವ ತನಕ ಒಂದು ಲೆಕ್ಕ, ಬಿದ್ದ ಮೇಲೆ ಇನ್ನೊಂದು ಲೆಕ್ಕ. ಅನ್ಯೋನ್ಯವಾಗಿ ಬದುಕುತ್ತಿದ್ದವರ ನಡುವೆ ಜಾತಿ ಜಗಳ ತಂದಿಡುವ ಜೀವಂತ ದಯ್ಯಾತ್ಮಗಳು. ನಂಬಿಸಿ ಮೋಸ ಮಾಡುವ ಪೋಲೀಸ್ ವ್ಯವಸ್ಥೆ. ಸ್ತ್ರೀ ಶಕ್ತಿಯ ಮತ್ತೊಂದು ರೂಪ, ಗಯ್ಯಾಳಿಯಾಗಿ ರೌದ್ರಾವತಾರ. ಮಕ್ಕಳಾಗಿಲ್ಲವೆಂದು ಗಂಡನ ಬೈಗುಳ ಸಾಕಾಗಿ ಮನೆಗೆ ಬಂದ ಔಷಧಿ ಪಂಡಿತನ ಮೋಡಿಗೆ ಅವನ ಜೊತೆ ಪರಾರಿಯಾದ ನಾಗಮ್ಮ ಮತ್ತೆ ವಾಪಸ್ಸು ಬಂದಾಗ ನಡೆಯುವ ಪಂಚಾಯಿತಿ ಚಿತ್ರಣ ಮತ್ತಷ್ಟು ಹಿಡಿದಿಡುತ್ತದೆ.
ಮೇಲ್ಜಾತಿ- ಕೆಳ ಜಾತಿಗಳ ನಡುವೆ ಜಗಳ ತಂದಿಕ್ಕಿದ ಪಿತೂರಿಗಳೆಲ್ಲವೂ ಬಯಲಾಗುತ್ತದೆ, ಗೋಮುಖ ವ್ಯಾಘ್ರ ದ ಆಸಾಮಿಯನ್ನು ಗಯ್ಯಾಳಿಗಳು ಊರಿನಿಂದ ಆಚೆಗೆ ಓಡಿಸಿ, ಸಾರಾಯಿ ಅಂಗಡಿಗೆ ಬೆಂಕಿ ಇಡುವ ಮೂಲಕ ಚಿತ್ರಕ್ಕೆ ತೆರೆ ಬೀಳುತ್ತದೆ.
ತೇಜಸ್ವಿಗೆ ತೇಜಸ್ವಿಯೇ ಸಾಟಿ. ಸುಮನ್ ಕಿತ್ತೂರ್ ರವರು ಕತೆಯನ್ನು ಕಟ್ಟಿ ಕೊಡುವ ಪ್ರಯತ್ನ ಮಾಡಿದ್ದಾರೆಯೇ ಹೊರತು ಪೂರ್ತಿ ಕಟ್ಟಿ ಕೊಡಲಾಗಿಲ್ಲ. ಅದು ತೇಜಸ್ವಿಯೆಂಬ ಕನ್ನಡ ಸಾಹಿತ್ಯದ ದೊಡ್ಡಾನೆಯನ್ನು ಚಲನ ಚಿತ್ರವೊಂದರ ಫ್ರೇಮ್ ಒಳಕ್ಕೆ ಕೂರಿಸಲು ಸಾಧ್ಯವಿಲ್ಲವೆಂಬುದನ್ನು ತೋರಿಸುತ್ತದೆ.
ಕೆಲವೊಂದು ಕಡೆ ಸಾಕಷ್ಟು ದೃಶ್ಯಾವಳಿಗಳ ಅವಶ್ಯತಕತೆಯಿತ್ತು. ಕಾಡು, ಹಸಿರು ತೋರಿಸುವ ಕೆಲಸವಾಗಬೇಕಿತ್ತು. ಎಲ್ಲದಕ್ಕೂ ಬೀಪ್ ಕೊಟ್ಟಿರುವ ಸೆನ್ಸಾರ್ ಮಂಡಳಿ ತೇಜಸ್ವಿ ಬದುಕಿದ್ದರೆ ಬರೀ ಬೀಪ್ ಗಳನ್ನೇ ಕೇಳಬೇಕಿತ್ತು. ಗ್ರಾಮೀಣ ಸೊಗಡಿನ ನಿಜ ಮಾತುಗಳಿಗೆಲ್ಲಾ ಸೆನ್ಸಾರ್ ಒಂದು ಕಪ್ಪು ಚುಕ್ಕೆ.
ಇದೆಲ್ಲವನ್ನೂ ಒತ್ತಟ್ಟಿಗಿರಿಸಿ ಸಿನಿಮಾ ನೋಡಿದರೆ ಕಿರಗೂರಿನ ಗಯ್ಯಾಳಿಗಳು ಸೂಪರ್ ....
Sunday, September 27, 2015
ನಾನು ಅವನಲ್ಲ ಅವಳು
ಸಿಗ್ನಲ್ ಗಳಲ್ಲಿ, ರಸ್ತೆಗಳಲ್ಲಿ, ಟ್ರೈನ್ ಗಳಲ್ಲಿ ಓಡಾಡುವಾಗ ಸರ್ವೇ ಸಾಮಾನ್ಯವಾಗಿ ಸಿಕ್ಕಿ , 'ಏ ರಾಜ ಹತ್ತು ರುಪಾಯಿ ಕೊಡೊ ಒಳ್ಳೆದಾಗುತ್ತೆ' ಅಂತ ಕೆನ್ನೆ ಗಿವುಚಿ ಅದೆಷ್ಟೋ ಬಾರಿ ಪೇಚಿಗೆ ಸಿಲುಕಿಸುವ ಸಂದರ್ಭಗಳಲ್ಲಿ ಕಾಣದ ಹಾಗೆ ನಾನು ಎಸ್ಕೇಪ್ ಆದದ್ದು ಇದೆ . ಚಿಲ್ಲರೆ ಇಲ್ಲದೆ 100ರೂ ಕೊಟ್ಟಾಗ ಚಿಲ್ಲರೆ ಕೊಡ್ತೀವಿ ಅಂತ ಹೇಳಿ, ನಾವ್ 3 ಜನ ಊಟ ಮಾಡ್ತಿವಿ ಅಂತ ಅವರು ಎಸ್ಕೇಪ್ ಆದದ್ದು ಇದೆ.
ಆದರೆ ಅದೇಕೋ 'ಜಯನಗರ 4th ಬ್ಲಾಕ್' ಎಂಬ ಒಂದು ಶಾರ್ಟ್ ಮೂವಿ ನೋಡಿದ ಮೇಲೆ ಸ್ವಲ್ಪ ಇರುಸು ಮುರಿಸಿನ ಭಾವನೆಗಳು ಬದಲಾದದ್ದು ನಿಜ. ಕೇಳಿದಾಗ ಒಂದೋ ಹತ್ತೋ ರುಪಾಯಿ ಕೊಟ್ಟಾಗ ಕೆಲವರು ಸುಮ್ಮನೆ ಹೋದದ್ದು ಉಂಟು, ಇನ್ನು ಕೆಲವೊಮ್ಮೆ ಚಿಲ್ಲರೆ ಇಲ್ಲ ಅಂದಾಗ ಮತ್ತದೇ ಗಲ್ಲ ಚಿವುಟಿದ್ದು ಉಂಟು.
ಅದಾದ ನಂತರ ಬಹಳ ದಿನಗಳ ಮೇಲೆ ನೋಡಿದ " I am Vidya by Living Smile Vidya" ಎಂಬ ಕಾದಂಬರಿ ಆಧಾರಿತ ಚಿತ್ರ - 'ನಾನು ಅವನಲ್ಲ ಅವಳು' ಚಿತ್ರವೂ ಕೂಡ ಅನಿರೀಕ್ಷಿತವಾಗಿ Transgender ಗಳಾದ ಮಂಗಳ ಮುಖಿಯರ ನಿಜ ಜೀವನವನ್ನು ಕಟ್ಟಿ ಕೊಡುತ್ತದೆ, ಅವರನ್ನು ಸಮಾಜ ನಡೆಸಿಕೊಳ್ಳುತ್ತಿರುವ ವಿಧಾನ ಬದಲಾಗಬೇಕಿದೆ ಎಂದು ತೋರಿಸುತ್ತದೆ. ಒಟ್ಟಿನಲ್ಲಿ ವಾಸ್ತವ ಸಮಾಜಕ್ಕೆ ತುಂಬಾ ಬೇಕಾದಂತಹ ಚಿತ್ರ 'ನಾನು ಅವನಲ್ಲ ಅವಳು'.
ಚಿತ್ರ ಮುಗಿದ ಮೇಲೆ ಟಿ ಎನ್ ಸೀತಾರಾಮ್ , ಬಿ ಎಸ್ ಲಿಂಗದೇವರು , ಸಂಚಾರಿ ವಿಜಯ್, ಅನುಪ್ ಸೀಳಿನ್, ಸುಂದರ್ ಇವರೆಲ್ಲರನ್ನು ಒಂದೇ ವೇದಿಕೆಯ ಮೇಲೆ ವಿಶೇಷ ಪ್ರದರ್ಶನದ ಸಂವಾದಕ್ಕೆ ಅವಕಾಶ ಮಾಡಿ ಕೊಟ್ಟದ್ದು 'ಅವಿರತ - ನಾಡಿಗಾಗಿ ನಿರಂತರ'.
2 ರಾಷ್ಟ್ರ ಪ್ರಶಸ್ತಿ ಪಡೆದ ಚಿತ್ರವನ್ನು ಮತ್ತು ಇಡೀ ಚಿತ್ರ ತಂಡವನ್ನು ಮಲ್ಲೇಶ್ವರಂನ ಸಿನಿ ಸ್ಕ್ವೇರ್ ಸವಿತಾ ಚಿತ್ರ ಮಂದಿರಕ್ಕೆ ಕರೆಸಿ, ನೂರಾರು ಜನಕ್ಕೆ ಚಿತ್ರವನ್ನು ಇಂಟರ್ವಲ್ ಇಲ್ಲದ ಹಾಗೆ ತೋರಿಸಿ, ಚಿತ್ರ ತಂಡವನ್ನು ಪರಿಚಯಿಸಿ, ಸೆಲ್ಫ್ಹಿ, ಫೋಟೋಗಳಿಗೆ ಅವಕಾಶ ಮಾಡಿಕೊಟ್ಟ ಅವಿರತ ತಂಡದ ಶ್ರಮಕ್ಕೊಂದು ಸಲಾಂ.
ಚಿತ್ರವನ್ನು ಒಂದು ಬಾರಿ ನೋಡಿ, ನಿಮ್ಮ ಮನಸ್ಸೂ ಬದಲಾಗಬಹುದು.
ಆದರೆ ಅದೇಕೋ 'ಜಯನಗರ 4th ಬ್ಲಾಕ್' ಎಂಬ ಒಂದು ಶಾರ್ಟ್ ಮೂವಿ ನೋಡಿದ ಮೇಲೆ ಸ್ವಲ್ಪ ಇರುಸು ಮುರಿಸಿನ ಭಾವನೆಗಳು ಬದಲಾದದ್ದು ನಿಜ. ಕೇಳಿದಾಗ ಒಂದೋ ಹತ್ತೋ ರುಪಾಯಿ ಕೊಟ್ಟಾಗ ಕೆಲವರು ಸುಮ್ಮನೆ ಹೋದದ್ದು ಉಂಟು, ಇನ್ನು ಕೆಲವೊಮ್ಮೆ ಚಿಲ್ಲರೆ ಇಲ್ಲ ಅಂದಾಗ ಮತ್ತದೇ ಗಲ್ಲ ಚಿವುಟಿದ್ದು ಉಂಟು.
ಚಿತ್ರ ಮುಗಿದ ಮೇಲೆ ಟಿ ಎನ್ ಸೀತಾರಾಮ್ , ಬಿ ಎಸ್ ಲಿಂಗದೇವರು , ಸಂಚಾರಿ ವಿಜಯ್, ಅನುಪ್ ಸೀಳಿನ್, ಸುಂದರ್ ಇವರೆಲ್ಲರನ್ನು ಒಂದೇ ವೇದಿಕೆಯ ಮೇಲೆ ವಿಶೇಷ ಪ್ರದರ್ಶನದ ಸಂವಾದಕ್ಕೆ ಅವಕಾಶ ಮಾಡಿ ಕೊಟ್ಟದ್ದು 'ಅವಿರತ - ನಾಡಿಗಾಗಿ ನಿರಂತರ'.
ಚಿತ್ರವನ್ನು ಒಂದು ಬಾರಿ ನೋಡಿ, ನಿಮ್ಮ ಮನಸ್ಸೂ ಬದಲಾಗಬಹುದು.
Subscribe to:
Posts (Atom)