ಪ್ರಸಾದ್ ರಕ್ಷಿದಿ: ಸುಮಾರು ವರ್ಷಗಳ ಕಾಲ ತೇಜಸ್ವಿಯವರ ಒಡನಾಡಿಯಾಗಿದ್ದಂತವರು.
2011 ರಲ್ಲಿ ಬೆಂಗಳೂರಿನಲ್ಲಿ ನಡೆದ 77 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪುಸ್ತಕ ಮಳಿಗೆಯೊಂದರಲ್ಲಿ ಅಕಸ್ಮಾತಾಗಿ ಸಿಕ್ಕ ಪುಸ್ತಕ ಪ್ರಸಾದ್ ರಕ್ಷಿದಿ ವಿರಚಿತ 'ನಮ್ಮ ನಡುವಿನ ತೇಜಸ್ವಿ'.
34 ಪುಟಗಳಿರುವ ಈ ಹೊತ್ತಗೆ ತೇಜಸ್ವಿ ಹೇಗಿದ್ದಿರಬಹುದು ಎನ್ನುವ ಒಂದು ಕಲ್ಪನೆಯನ್ನು ಕಟ್ಟಿಕೊಡುತ್ತದೆ.
ಆ ಪುಸ್ತಕದ ಒಂದು ತುಣುಕು ಇಲ್ಲಿದೆ
- - - - - - - - - - - - - - - - - - - - - - - - - - - - - - - - - - -
ಪ್ರದೀಪ್ ಕೆಂಜಿಗೆಯರೊಡನೆ ನಡೆದ ಒಂದು ಘಟನೆ::
'ಅಂದು ಸಂಜೆ ನಾಲ್ಕರ ವೇಳೆಗೆ ತೇಜಸ್ವಿಯವರು ' ಬಾ ಇಲ್ಲೇ ಬೆಳ್ಳೇಕೆರೆಗೆ ಹೋಗಿ ಬರೋಣ, ಒಂದು ರಂಗ ಶಿಬಿರ ಮಾಡ್ತಾ ಇದ್ದಾರೆ' ಎಂದರು. ಇಬ್ಬರೂ ಸ್ಕೂಟರಿನಲ್ಲಿ ಹೊರಟೆವು. ದಾರಿಯಲ್ಲಿ ಚಿಟ್ಟನಹಳ್ಳದ ಹತ್ತಿರ ಬರುವಾಗ ಸ್ಕೂಟರ್ ನಿಲ್ಲಿಸಿ 'ಇಲ್ಲಿ ಎಂಥ ಮೀನಿದೆ ನೋಡೋಣ ಬಾ' ಎಂದು ಹಳ್ಳದ ಹತ್ತಿರ ಹೋದರು. ನಾನು ಅವರ ಹಿಂದೆಯೇ ಹೋದೆ. ಹಳ್ಳದ ಬಳಿ ಪ್ಯಾಂಟಿನ ಜೇಬಿಗೆ ಕೈ ಹಾಕಿ ಏನನ್ನೋ ತೆಗೆದರು, ಅಷ್ಟರಲ್ಲಿ ಒಂದು ಚೀಟಿ ಅವರ ಜೇಬಿನಿಂದ ಜಾರಿ ಕೆಳಗೆ ಬಿತ್ತು. ಹೆಕ್ಕಿ ಕೊಡೋಣವೆಂದು ತೆಗೆದು ನೋಡಿದೆ. ಅದೊಂದು ವಿಮಾನಯಾನದ ಟಿಕೆಟ್, ಅದೂ ದೆಹಲಿಗೆ. 'ನೋಡಿ ಪ್ಲೈಟ್ ಟಿಕೆಟ್' ಎಂದು ಅವರಿಗೆ ಕೊಟ್ಟೆ. ಅದನ್ನೊಮ್ಮೆ ಬಿಡಿಸಿ ನೋಡಿ 'ಇದರ ಮನೆ ಹಾಳಾಯ್ತು' ಎಂದು ಹೊಳೆಗೆಸೆದರು. ಹೊಳೆಯಲ್ಲಿನ ಮೀನು ನೋಡಿ ಮತ್ತೆ ಬೆಳ್ಳೇಕೆರೆಗೆ ಹೊರಟೆವು.
ಅವರ ತಬರನ ಕಥೆ ಸಿನಿಮಾ ಆಗಿ ಕಥಾ ವಿಭಾಗದಲ್ಲಿ ರಾಷ್ಟ್ರ ಪ್ರಶಸ್ತಿ ಗಳಿಸಿತ್ತು. ಪ್ರಶಸ್ತಿ ಸ್ವೀಕರಿಸಲು ದೆಹಲಿಗೆ ಹೋಗಲು ಸರ್ಕಾರ ಕಳಿಸಿದ್ದ ವಿಮಾನಯಾನದ ಟಿಕೆಟ್ಟಾಗಿತ್ತು ಅದು. ದೆಹಲಿಗೆ ಹೋಗೋದನ್ನು ಬಿಟ್ಟು ಅಂದು ಅವರು ಬೆಳ್ಳೇಕೆರೆ ರಂಗ ಶಿಬಿರದ ಉದ್ಘಾಟನೆಗೆ ಹೊರಟಿದ್ದರು.
- - - - - - - - - - - - - - - - - - - - - - - - - - - - - - - - - - - - -
ಹೀಗೆ ಹತ್ತು ಹಲವು ಒಡನಾಟಗಳನ್ನು ಇದರಲ್ಲಿ ಹಂಚಿಕೊಂಡಿದ್ದಾರೆ.
ಅವರೂರಲ್ಲಿರುವ ರಂಗಮಂದಿರ, ಗ್ರಂಥಾಲಯ, ವಾಚನಾಲಯ ಮತ್ತು ಅತಿಥಿಗೃಹಗಳ ಸಂಕೀರ್ಣಕ್ಕೆ 'ಪೂರ್ಣ ಚಂದ್ರ ತೇಜಸ್ವಿ ರಂಗಮಂದಿರ ಸಂಕೀರ್ಣ' ಎಂದು ಹೆಸರಿಟ್ಟಿದ್ದಾರೆ.
ಇಂದು ಅವರ ಜನ್ಮದಿನ, ನಮ್ಮೆಲ್ಲರ ಪರವಾಗಿ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳನ್ನು ತಿಳಿಸೋಣ.
Happy Birthday Prasad Raxidi Sir.
— with Prasad Raxidi.

No comments:
Post a Comment