Sunday, September 27, 2015

ನಾನು ಅವನಲ್ಲ ಅವಳು

ಸಿಗ್ನಲ್ ಗಳಲ್ಲಿ, ರಸ್ತೆಗಳಲ್ಲಿ, ಟ್ರೈನ್ ಗಳಲ್ಲಿ ಓಡಾಡುವಾಗ ಸರ್ವೇ ಸಾಮಾನ್ಯವಾಗಿ ಸಿಕ್ಕಿ , 'ಏ ರಾಜ ಹತ್ತು ರುಪಾಯಿ ಕೊಡೊ ಒಳ್ಳೆದಾಗುತ್ತೆ' ಅಂತ ಕೆನ್ನೆ ಗಿವುಚಿ ಅದೆಷ್ಟೋ ಬಾರಿ ಪೇಚಿಗೆ ಸಿಲುಕಿಸುವ ಸಂದರ್ಭಗಳಲ್ಲಿ ಕಾಣದ ಹಾಗೆ ನಾನು ಎಸ್ಕೇಪ್ ಆದದ್ದು ಇದೆ . ಚಿಲ್ಲರೆ ಇಲ್ಲದೆ 100ರೂ ಕೊಟ್ಟಾಗ ಚಿಲ್ಲರೆ ಕೊಡ್ತೀವಿ ಅಂತ ಹೇಳಿ, ನಾವ್ 3 ಜನ ಊಟ ಮಾಡ್ತಿವಿ ಅಂತ ಅವರು ಎಸ್ಕೇಪ್ ಆದದ್ದು ಇದೆ.

ಆದರೆ ಅದೇಕೋ 'ಜಯನಗರ 4th ಬ್ಲಾಕ್' ಎಂಬ ಒಂದು ಶಾರ್ಟ್ ಮೂವಿ ನೋಡಿದ ಮೇಲೆ ಸ್ವಲ್ಪ ಇರುಸು ಮುರಿಸಿನ ಭಾವನೆಗಳು ಬದಲಾದದ್ದು ನಿಜ. ಕೇಳಿದಾಗ ಒಂದೋ ಹತ್ತೋ ರುಪಾಯಿ ಕೊಟ್ಟಾಗ ಕೆಲವರು ಸುಮ್ಮನೆ ಹೋದದ್ದು ಉಂಟು, ಇನ್ನು ಕೆಲವೊಮ್ಮೆ ಚಿಲ್ಲರೆ ಇಲ್ಲ ಅಂದಾಗ ಮತ್ತದೇ ಗಲ್ಲ ಚಿವುಟಿದ್ದು ಉಂಟು.


ಅದಾದ ನಂತರ ಬಹಳ ದಿನಗಳ ಮೇಲೆ ನೋಡಿದ " I am Vidya by Living Smile Vidya" ಎಂಬ ಕಾದಂಬರಿ ಆಧಾರಿತ ಚಿತ್ರ - 'ನಾನು ಅವನಲ್ಲ ಅವಳು' ಚಿತ್ರವೂ ಕೂಡ ಅನಿರೀಕ್ಷಿತವಾಗಿ Transgender ಗಳಾದ ಮಂಗಳ ಮುಖಿಯರ ನಿಜ ಜೀವನವನ್ನು ಕಟ್ಟಿ ಕೊಡುತ್ತದೆ, ಅವರನ್ನು ಸಮಾಜ ನಡೆಸಿಕೊಳ್ಳುತ್ತಿರುವ ವಿಧಾನ ಬದಲಾಗಬೇಕಿದೆ ಎಂದು ತೋರಿಸುತ್ತದೆ. ಒಟ್ಟಿನಲ್ಲಿ ವಾಸ್ತವ ಸಮಾಜಕ್ಕೆ ತುಂಬಾ ಬೇಕಾದಂತಹ ಚಿತ್ರ 'ನಾನು ಅವನಲ್ಲ ಅವಳು'.
ಚಿತ್ರ ಮುಗಿದ ಮೇಲೆ ಟಿ ಎನ್ ಸೀತಾರಾಮ್ , ಬಿ ಎಸ್ ಲಿಂಗದೇವರು , ಸಂಚಾರಿ ವಿಜಯ್, ಅನುಪ್ ಸೀಳಿನ್, ಸುಂದರ್ ಇವರೆಲ್ಲರನ್ನು ಒಂದೇ ವೇದಿಕೆಯ ಮೇಲೆ ವಿಶೇಷ ಪ್ರದರ್ಶನದ ಸಂವಾದಕ್ಕೆ ಅವಕಾಶ ಮಾಡಿ ಕೊಟ್ಟದ್ದು 'ಅವಿರತ - ನಾಡಿಗಾಗಿ ನಿರಂತರ'.


2 ರಾಷ್ಟ್ರ ಪ್ರಶಸ್ತಿ ಪಡೆದ ಚಿತ್ರವನ್ನು ಮತ್ತು ಇಡೀ ಚಿತ್ರ ತಂಡವನ್ನು ಮಲ್ಲೇಶ್ವರಂನ ಸಿನಿ ಸ್ಕ್ವೇರ್ ಸವಿತಾ ಚಿತ್ರ ಮಂದಿರಕ್ಕೆ ಕರೆಸಿ, ನೂರಾರು ಜನಕ್ಕೆ ಚಿತ್ರವನ್ನು ಇಂಟರ್ವಲ್ ಇಲ್ಲದ ಹಾಗೆ ತೋರಿಸಿ, ಚಿತ್ರ ತಂಡವನ್ನು ಪರಿಚಯಿಸಿ, ಸೆಲ್ಫ್ಹಿ, ಫೋಟೋಗಳಿಗೆ ಅವಕಾಶ ಮಾಡಿಕೊಟ್ಟ ಅವಿರತ ತಂಡದ ಶ್ರಮಕ್ಕೊಂದು ಸಲಾಂ.
ಚಿತ್ರವನ್ನು ಒಂದು ಬಾರಿ ನೋಡಿ, ನಿಮ್ಮ ಮನಸ್ಸೂ ಬದಲಾಗಬಹುದು.


#NanuAvanallaAvallu #AvirathaPrathishtaana