Saturday, August 29, 2015

ತೇಜಸ್ವಿ ಮನೆಯಲ್ಲಿ ಒಂದಶ್ಟು ಹೊತ್ತು

28/08/2015 - It was a coincidence that its been five years after stepping out of engineering and Mr. Srikanth Kaller was talking about weekend trip. Even though it was not finalized to take bus all together or hire a vehicle, but just packed bag for an unplanned trip with a determined mind to not finalized places. Either Dharmasthala or Ooty or Goa. But ended up with 1st one... Started from Bangalore but still no places are decided after Dharmasthala.. ಎಲ್ಲಿಗೇ ಪಯಣ... ಯಾವುದೋ ದಾರಿ....

Just enjoyed the night journey with all jokes from our famous SIET IS joke crackers Mr.Santhosh and Mr. Kiran Sn

29/08/2015 - Finally, next day morning reached Dharmasthala and left around 1 PM then just moved to Charmadi Ghat and spent rest of the day by just enjoying the nature.

Santhosh wanted to go towards Ooty and lied that heavy rain in Dharmasthala that he asked one of his friend. Unfortunately it was very hot in Dharmasthala that too in August(rainy season) and no rain in Charmadi Ghat. This becomes a big Joke all over the trip for 2 days.

ತೇಜಸ್ವಿಯವರ ಅದೆಷ್ಟೋ ಕಥೆಗಳಿಗೆ ಸ್ಪೂರ್ತಿ ಚಾರ್ಮಾಡಿ. ಭೂತ ಕಾಡು, ಹಾರುವ ಓತಿಕ್ಯಾತ ಮಾಯವಾದ ಕರ್ವಾಲೋದ ನಾರ್ವೆ ಕಾಡು, ತೇಜಸ್ವಿಯವರ ಕಥೆಗಳಲ್ಲಿ ಹೆಸರಿಸಿರುವ ಕಾಡುಗಳು ಇದೇ ಚಾರ್ಮಾಡಿ ಘಟ್ಟದಲ್ಲಿವೆ. ಹಸಿರು ತುಂಬಿದ ದಟ್ಟ ಕಾಡುಗಳು, ಮಂಜು ಮುಸುಕಿದ ವಾತಾವರಣ, ಕೈಗೆಟಕುವ ಮೋಡಗಳು, ದಾರಿಯುದ್ದಕ್ಕೂ ಸಿಗುವ ಜಲಪಾತಗಳು ಈ ಘಾಟಿ ರಸ್ತೆಯ ವಿಷೇಶ.

Charmadi ghat will end at the Annappa Swamy temple and then road will take you to Kottigehaara (Gateway to Western Ghats).

Stopped in KottigeHaara for famous as well as Yummy 'Neeru Dosa' (Ondanondu Kaaladalli) and ate like 'Bhootayyana Maga Ayyu'.

From Kottigehaara we moved to visit Tejasvi's Home-Niruttara at Mudigere Handpost, quite confused to find out the home but found finally in the hidden place and covered with full of trees. Unexpectedly a dog came out of the house without my notice and started jumping all over the body. All other people are in front of Yellow gate which is 400Mtr away and nothing is visible. Tejasvi's Wife came out of the house and asked to catch the head of the dog while I was just trying to escape from it. Finally suceeded with holding the head. Spent some time in Niruttara with few words and pics with Mrs.Rajeshwari Tejasvi and then moved to Chikka Magala Uru.

ತೇಜಸ್ವಿ ಮನೆಯಲ್ಲಿ ಒಂದಶ್ಟು ಹೊತ್ತು
-------------------------------------
ಮೂಡಿಗೆರೆ ಹ್ಯಾಂಡ್ ಪೋಸ್ಟ್ ನಲ್ಲಿ ಒಬ್ಬರನ್ನು ಕೇಳಿದಾಗ ತೇಜಸ್ವಿ ಮನೆಯ ದಾರಿ ತೋರಿಸಿದರು, ಆದರೆ ನಾವು ಅದೇ ದಾರಿಯಲ್ಲಿ ಮುಂದೆ ಸಾಗಿದಾಗ ಮನೆ ಕಂಡು ಹಿಡಿಯುವುದೇ ಕಶ್ಟವಾಯಿತು. KS Parameshwar ರವರ 'ಮತ್ತೆ ಮತ್ತೆ ತೇಜಸ್ವಿ'ಯಲ್ಲಿ ಹಳದಿ ಬಣ್ಣದ ಗೇಟ್ ನೋಡಿದ್ದರಿಂದಲೇ ಅದೇ ಮನೆ ಇರಬಹುದು ಎಂದು ಅಂದುಕೊಂಡರೂ ಪಕ್ಕಾ ಆಗಲಿಲ್ಲ, ಎಲ್ಲರನ್ನೂ ಅಲ್ಲೇ ಇರಲು ಹೇಳಿ ನಾನು ಗೇಟ್ ತೆಗೆದು ಒಳಗೆ ಹೋದಶ್ಟೂ ನಿಶ್ಯಬ್ದತೆ, ಮನೆಯೇ ಕಾಣುತ್ತಿಲ್ಲ, ಸುಮಾರು ದೂರ ನಡೆದ ಮೇಲೆ ಮನೆ ಕಾಣಿಸಿತು, ಹತ್ತಿರ ಹೋಗಿ ಬಾಗಿಲು ತಟ್ಟಿದೆ, ರಾಜೇಶ್ವರಿ ಯವರು ಬಂದು 'ಏನು ಒಬ್ಬರೇ ಬಂದಿರಲ್ಲ' ಅಂದರು, ಎಲ್ಲರೂ ಗೇಟಿನ ಬಳಿ ಇದ್ದಾರೆ ಕರೆಯುತ್ತೇನೆ ಎಂದು ಇತ್ತ ಕಡೆ ಬಂದು ಪೋನ್ ಮಾಡಿ ಮಾತಾಡುತ್ತಿದ್ದೆ, ಅಶ್ಟರಲ್ಲಿ ಮನೆಯ ಹಿಂದೆ ಇದ್ದ ಅವರ ಸಾಕು ನಾಯಿ ಹಿಂದಿನಿಂದ ದಾಳಿ ಮಾಡಿತ್ತು, ಮೈ ಮೇಲೆ ಹೆಗರಲು ಶುರು ಮಾಡಿತ್ತು, ಭಯ ಬಿದ್ದರೂ, ಅದು ಏನೂ ಮಾಡಲ್ಲ ಅಂತ ಕನ್ಫರ್ಮ್ ಆದರೂ ಅದರಿಂದ ತಪ್ಪಿಸಿಕೊಳ್ಳಲು ಪ್ರಯತ್ನ ಪಟ್ಟರೂ ಅದು ಬಿಡದೇ ಹಿಂದೆ ಹಿಂದೆಯೇ ಬಂದು ನೆಗೆಯುತ್ತಿತ್ತು, ಅಶ್ಟರಲ್ಲಿ ಈಚೆ ಬಂದ ರಾಜೇಶ್ವರಿಯವರು ಅದರ ಕತ್ತಿಗೆ ಕೈ ಹಾಕಿ ಹಿಡಿಯಲು ಹೇಳಿದರು, ಕೊನೆಗೂ ಸಿಕ್ಕಿತು, ಅದರಿಂದ ಬಿಡಿಸಿಕೊಳ್ಳುವಶ್ಟರಲ್ಲಿ ಸಾಕು ಸಾಕಾಗಿ ಹೋಯ್ತು.

ಇವರು ಮತ್ತೆ ಪೋನ್ ಮಾಡಿದರು, ಏನೂ ಕಾಣುತ್ತಿಲ್ಲ ಇನ್ನು ಎಶ್ಟು ದೂರ ಇದೆ ಅಂತ, ಆ ದಾರಿ ಮುಗಿಯುವವರೆಗೂ ನಡೆದು ಬನ್ನಿ ಎಂದು ಹೇಳಿದೆ.. ಎಲ್ಲರೂ ಬಂದ ಮೇಲೆ ಎಲ್ಲರ ಪರಿಚಯ ಮಾಡಿಕೊಂಡ ರಾಜೇಶ್ವರಿಯವರು ಸುಮಾರು ಹೊತ್ತು ತೇಜಸ್ವಿಯವರ ಬಗ್ಗೆ ಒಂದಶ್ಟು ಹೇಳಿದರು, ಅವರ ಜೊತೆ ಒಂದಶ್ಟು ಪೋಟೋ ತೆಗೆದುಕೊಂಡೆವು.

'ನಿರುತ್ತರ' ಎಂದು ಹೆಸರಿಟ್ಟ ಮನೆ ಹೊರಗಿನಿಂದ ನೋಡಲು 'ನಿರಂತರ-ನಿಶ್ಯಬ್ದ-ನಿರುತ್ತರ'ವೆನಿಸಿದರೂ ಅಲ್ಲಿಗೆ ಕಾಲಿಟ್ಟವರಿಗೆಲ್ಲಾ 'ಉತ್ತರ' ಸಿಗುತ್ತದೆ, ನಗು ಮುಖದ ರಾಜೇಶ್ವರಿಯವರ ತೇಜಸ್ವಿಯವರ ಮಾತುಗಳು ಸಿಗುತ್ತವೆ. ತೇಜಸ್ವಿಯವರು ನಿರ್ಮಿಸಿದ್ದ ಕೊಳ, ಅವರೇ ನೆಟ್ಟು ಬೆಳೆಸಿದ ಮರ-ಗಿಡಗಳು, ಅವರು ಬಿಟ್ಟು ಹೋದ ಒಂದೇ ಸೀಟಿನ ಸ್ಕೂಟರ್, ಮನೆಯೊಳಗಿರುವ ಅವರ ದೊಡ್ಡದಾದ ಪೋಟೊ ಎಲ್ಲವೂ ತೇಜಸ್ವಿ ಇಲ್ಲೇ ಎಲ್ಲೋ ತೋಟದೊಳಗಿದ್ದಾರೆ "ತೇಜಸ್ವಿ ಅಜರಾಮರ" ಅನ್ನುವ ಅನುಭವ ಕೊಡುತ್ತವೆ.

ಕೊಟ್ಟಿಗೆಹಾರ

ಕೊಟ್ಟಿಗೆಹಾರ ಚೆಕ್ ಪೋಸ್ಟ್

ನಿರುತ್ತರ

ರಾಜೇಶ್ವರಿ ತೇಜಸ್ವಿ

ರಾಜೇಶ್ವರಿ ತೇಜಸ್ವಿಯವರ ಜೊತೆಯಲ್ಲಿ

ದಾಳಿ ಮಾಡಿದ ಸಾಕು ನಾಯಿ

ನಿರುತ್ತರದ ಹಿಂಭಾಗ

ತೇಜಸ್ವಿಯವರು ನಿರ್ಮಿಸಿದ್ದ ಕೊಳ



ನಿರುತ್ತರದ ಹಳದಿ ಬಣ್ಣದ ಗೇಟು

Thursday, August 13, 2015

ತೇಜಸ್ವಿ - ಪ್ರಸಾದ್ ರಕ್ಷಿದಿ

ಪ್ರಸಾದ್ ರಕ್ಷಿದಿ: ಸುಮಾರು ವರ್ಷಗಳ ಕಾಲ ತೇಜಸ್ವಿಯವರ ಒಡನಾಡಿಯಾಗಿದ್ದಂತವರು.

2011 ರಲ್ಲಿ ಬೆಂಗಳೂರಿನಲ್ಲಿ ನಡೆದ 77 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪುಸ್ತಕ ಮಳಿಗೆಯೊಂದರಲ್ಲಿ ಅಕಸ್ಮಾತಾಗಿ ಸಿಕ್ಕ ಪುಸ್ತಕ ಪ್ರಸಾದ್ ರಕ್ಷಿದಿ ವಿರಚಿತ 'ನಮ್ಮ ನಡುವಿನ ತೇಜಸ್ವಿ'.
34 ಪುಟಗಳಿರುವ ಈ ಹೊತ್ತಗೆ ತೇಜಸ್ವಿ ಹೇಗಿದ್ದಿರಬಹುದು ಎನ್ನುವ ಒಂದು ಕಲ್ಪನೆಯನ್ನು ಕಟ್ಟಿಕೊಡುತ್ತದೆ.


ಆ ಪುಸ್ತಕದ ಒಂದು ತುಣುಕು ಇಲ್ಲಿದೆ
- - - - - - - - - - - - - - - - - - - - - - - - - - - - - - - - - - -
ಪ್ರದೀಪ್ ಕೆಂಜಿಗೆಯರೊಡನೆ ನಡೆದ ಒಂದು ಘಟನೆ::

'ಅಂದು ಸಂಜೆ ನಾಲ್ಕರ ವೇಳೆಗೆ ತೇಜಸ್ವಿಯವರು ' ಬಾ ಇಲ್ಲೇ ಬೆಳ್ಳೇಕೆರೆಗೆ ಹೋಗಿ ಬರೋಣ, ಒಂದು ರಂಗ ಶಿಬಿರ ಮಾಡ್ತಾ ಇದ್ದಾರೆ' ಎಂದರು. ಇಬ್ಬರೂ ಸ್ಕೂಟರಿನಲ್ಲಿ ಹೊರಟೆವು. ದಾರಿಯಲ್ಲಿ ಚಿಟ್ಟನಹಳ್ಳದ ಹತ್ತಿರ ಬರುವಾಗ ಸ್ಕೂಟರ್ ನಿಲ್ಲಿಸಿ 'ಇಲ್ಲಿ ಎಂಥ ಮೀನಿದೆ ನೋಡೋಣ ಬಾ' ಎಂದು ಹಳ್ಳದ ಹತ್ತಿರ ಹೋದರು. ನಾನು ಅವರ ಹಿಂದೆಯೇ ಹೋದೆ. ಹಳ್ಳದ ಬಳಿ ಪ್ಯಾಂಟಿನ ಜೇಬಿಗೆ ಕೈ ಹಾಕಿ ಏನನ್ನೋ ತೆಗೆದರು, ಅಷ್ಟರಲ್ಲಿ ಒಂದು ಚೀಟಿ ಅವರ ಜೇಬಿನಿಂದ ಜಾರಿ ಕೆಳಗೆ ಬಿತ್ತು. ಹೆಕ್ಕಿ ಕೊಡೋಣವೆಂದು ತೆಗೆದು ನೋಡಿದೆ. ಅದೊಂದು ವಿಮಾನಯಾನದ ಟಿಕೆಟ್, ಅದೂ ದೆಹಲಿಗೆ. 'ನೋಡಿ ಪ್ಲೈಟ್ ಟಿಕೆಟ್' ಎಂದು ಅವರಿಗೆ ಕೊಟ್ಟೆ. ಅದನ್ನೊಮ್ಮೆ ಬಿಡಿಸಿ ನೋಡಿ 'ಇದರ ಮನೆ ಹಾಳಾಯ್ತು' ಎಂದು ಹೊಳೆಗೆಸೆದರು. ಹೊಳೆಯಲ್ಲಿನ ಮೀನು ನೋಡಿ ಮತ್ತೆ ಬೆಳ್ಳೇಕೆರೆಗೆ ಹೊರಟೆವು.

ಅವರ ತಬರನ ಕಥೆ ಸಿನಿಮಾ ಆಗಿ ಕಥಾ ವಿಭಾಗದಲ್ಲಿ ರಾಷ್ಟ್ರ ಪ್ರಶಸ್ತಿ ಗಳಿಸಿತ್ತು. ಪ್ರಶಸ್ತಿ ಸ್ವೀಕರಿಸಲು ದೆಹಲಿಗೆ ಹೋಗಲು ಸರ್ಕಾರ ಕಳಿಸಿದ್ದ ವಿಮಾನಯಾನದ ಟಿಕೆಟ್ಟಾಗಿತ್ತು ಅದು. ದೆಹಲಿಗೆ ಹೋಗೋದನ್ನು ಬಿಟ್ಟು ಅಂದು ಅವರು ಬೆಳ್ಳೇಕೆರೆ ರಂಗ ಶಿಬಿರದ ಉದ್ಘಾಟನೆಗೆ ಹೊರಟಿದ್ದರು.
- - - - - - - - - - - - - - - - - - - - - - - - - - - - - - - - - - - - -

ಹೀಗೆ ಹತ್ತು ಹಲವು ಒಡನಾಟಗಳನ್ನು ಇದರಲ್ಲಿ ಹಂಚಿಕೊಂಡಿದ್ದಾರೆ.

ಅವರೂರಲ್ಲಿರುವ ರಂಗಮಂದಿರ, ಗ್ರಂಥಾಲಯ, ವಾಚನಾಲಯ ಮತ್ತು ಅತಿಥಿಗೃಹಗಳ ಸಂಕೀರ್ಣಕ್ಕೆ 'ಪೂರ್ಣ ಚಂದ್ರ ತೇಜಸ್ವಿ ರಂಗಮಂದಿರ ಸಂಕೀರ್ಣ' ಎಂದು ಹೆಸರಿಟ್ಟಿದ್ದಾರೆ.

ಇಂದು ಅವರ ಜನ್ಮದಿನ, ನಮ್ಮೆಲ್ಲರ ಪರವಾಗಿ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳನ್ನು ತಿಳಿಸೋಣ.

Happy Birthday Prasad Raxidi Sir.


— with Prasad Raxidi.