Sunday, July 12, 2015

ಕೆಂಡ ಸಂಪಿಗೆ


ಕೆಂಡ ಸಂಪಿಗೆಯ ಗಮಲು ಘಮ್ಮೆನ್ನುತ್ತಿದೆ. ಬೆಂಗಳೂರಿನಿಂದ ಬೆಳಗಾವಿಯವರೆಗೆ ಬಿಟ್ಟೂ ಬಿಡದೆ ಓಡುವ ಕಥೆ, ಮುಂಬೈಯಲ್ಲಿ ನಿಲ್ಲುತ್ತದೆ. ಬೆಂಗಳೂರು - ಪೂನಾ ಹೆದ್ದಾರಿಯಲ್ಲಿ ಸಾಗುವ ಕಥೆಯಲ್ಲಿ ಹಿರಿಯೂರು, ಚಿತ್ರದುರ್ಗ, ದಾವಣಗೆರೆ, ಹುಬ್ಬಳ್ಳಿ, ಬೆಳಗಾವಿಯ ದೃಶ್ಯಗಳು ಕ್ಯಾಮೆರಾದಲ್ಲಿ ಮನಮೋಹಕವಾಗಿ ಸೆರೆಯಾಗಿವೆ. ಅದ್ಬುತವಾದ ಗಿಳಿ ಮರಿ ಕಥೆ ಹೆಣೆದಿರುವ ಸೂರಿ, ಪೋಲೀಸ್ ವ್ಯವಸ್ಥೆಯ ಕುತಂತ್ರಗಾರಿಕೆಯನ್ನು ತೆರೆದಿಡುತ್ತಾರೆ.



ಒಂದು ಕಾಲದಲ್ಲಿ ಸೂರಿಯ ಡ್ರೈವರ್, ಇಂದು ಅವರ ಚಿತ್ರದ ಹೀರೋ !! ಹೊಸಬರನ್ನು ಹಾಕಿಕೊಂಡು ಫಿಲಂ ತೆಗೆದು ಇಷ್ಟರ ಮಟ್ಟಿಗೆ ಚಿತ್ರ ಕೊಡೋದು ಅಂದ್ರೆ ಸುಮ್ನೆನಾ?



ರಂಗಭೂಮಿ ಕಲಾವಿದರು, ಪತ್ರಕರ್ತರು , 'ಮದ್ರಾಸ್ ಕೆಫೆ'ಯ ಬಾಲ, ಪ್ರಕಾಶ್ ಬೆಳವಾಡಿಯವರು ಡಿಸಿಪಿ ಸೂರ್ಯಕಾಂತ್ ಆಗಿ ತೆಗೆದುಕೊಳ್ಳುವ ಪ್ರತಿಯೊಂದು ಹೆಜ್ಜೆಯೂ ಚಿತ್ರದ ಟ್ವಿಸ್ಟ್. ಪಾತ್ರ ಖಳ ನಾಯಕನಾದರೂ, ಅವರ ನಟನೆ ನಿಜಕ್ಕೂ ಎಲ್ಲರಿಗೂ ಇಷ್ಟವಾಗುವಂತದ್ದು.

ಒಟ್ಟಿನಲ್ಲಿ ಕೆಂಡ ಸಂಪಿಗೆ ವಾಸನೆ ಘಮ ಘಮ ಪರಿಮಳ.ಇದು ಬರಿ Part-II ಗಿಳಿ ಮರಿ ಕಥೆ, Part-1 ಕಾಗೆ ಬಂಗಾರ ಕಥೆ 2016ಕ್ಕೆ ಅಂತೆ.

Prakash Belawadi #kendasampige #super




No comments:

Post a Comment