Friday, June 5, 2015

UnSung Heros of Bhadra Wild Life

ಈಗ್ಗೆ 5 ವರ್ಷಗಳ ಹಿಂದೆ ಶ್ರೀದೇವಿ ತಾಂತ್ರಿಕ ವಿದ್ಯಾಲಯದಲ್ಲಿ ನಡೆದ "ದೃಷ್ಟಿ - ಶಾರ್ಟ್ ಫಿಲಂ" ಕಾರ್ಯಕ್ರಮಕ್ಕೆ ನಾವು ಆಯ್ಕೆ ಮಾಡಿಕೊಂಡಿದ್ದ ವಿಷಯ "Global Warming"
9 ಜನರ ಒಡಗೂಡಿ, "ನವಗ್ರಹ" ತಂಡ ಎಂದು ಹೆಸರಿಸಿ, ಅವತ್ತಿನ ಮನಸ್ಥಿತಿಗೆ, ಬುದ್ದಿವಂತಿಕೆಗೆ ತೋಚಿದ್ದನ್ನು ಗೀಚಿ, ಅದನ್ನೇ ತಿದ್ದಿ ತೀಡಿ ಒಂದು ರೂಪಕ್ಕೆ ತಂದು,ಇದ್ದ ಒಂದು ಬೇಸಿಕ್ ಕ್ಯಾಮೆರಾದಲ್ಲಿ ನೆಪಕ್ಕಾಗಿ ಶೂಟ್ ಮಾಡಿ, ಯಾವುದೊ ಒಂದು ಲೈಸೆನ್ಸ್ ಇಲ್ಲದ softwareನಲ್ಲಿ ಅರ್ಧರಾತ್ರಿ ವರೆಗೂ ಎಡಿಟ್ ಮಾಡಿ ಸಿಕ್ಕ ಸಿಕ್ಕ ವೀಡಿಯೊ ಕ್ಲಿಪ್ಸ್ ಗಳನ್ನೆಲ್ಲ ನಡು-ನಡುವೆ ಸೇರಿಸಿ "ವನಶ್ರೀ" ಎಂದು ಟೈಟಲ್ ಕೊಟ್ಟು ಈ ವೀಡಿಯೊ ಮಾಡಿದೆವು.





ಇಂದು ಜೂನ್ - 5, "ವಿಶ್ವ ಪರಿಸರ ದಿನಾಚರಣೆ", ಫೇಸ್ಬುಕ್ನಲ್ಲಿ share ಆಗಿದ್ದ Prashanth S Nayaka ರವರ "The UnSung Heros of Bhadra Wild Life" ನೋಡುವಾಗ ನೆನಪಾಗಿ, ಮತ್ತೆ 'ವನಶ್ರೀ' ವೀಡಿಯೊ ನೋಡಿದಾಗ ಅನಿಸಿದ್ದು ಇದೇ ವಿಷಯವನ್ನು ಇನ್ನು ಚೆನ್ನಾಗಿ ಚಿತ್ರಿಸಬಹುದಿತ್ತು, ಪ್ರಸ್ತಾಪಿಸಬಹುದಿತ್ತು ಅನ್ನುವುದು 100ಕ್ಕೆ 100ರಷ್ಟು ಸತ್ಯ.
ಅದೇನೇ ಆಗಿರಲಿ, ಇಂದು ವಿಶ್ವ ಪರಿಸರ ದಿನಾಚರಣೆ, "ನಮ್ಮ ಪಾಲಿಗೆ ಭೂಮಿ ಹಾಳಾಗುತ್ತಿದೆಯೇ ಹೊರತು ತನ್ನಷ್ಟಕ್ಕಲ್ಲ" - ಎಂಬ "ತೇಜಸ್ವಿ" ಅವರ "ಚಿದಂಬರ ರಹಸ್ಯ"ದ ನಾಣ್ಣುಡಿಯಂತೆ ನಾವು ನಮ್ಮ ಭೂಮಿಯನ್ನು ಎಷ್ಟರ ಮಟ್ಟಿಗೆ ಕಾಪಾಡಿಕೊಳ್ಳುತ್ತೇವೆ ಅನ್ನುವುದು ನಮ್ಮ ಮೇಲೆ ಅವಲಂಬಿತವಾಗಿದೆ. ಇಲ್ಲವಾದಲ್ಲಿ ಎಲ್ಲರೂ ಒಟ್ಟಿಗೆ ಭೂಗರ್ಭದೊಳಗೆ ಹುದುಗಿ ಹೋಗುವುದರಲ್ಲಿ ಯಾವುದೇ ಸಂಶಯವಿಲ್ಲ.



Prashanth S Nayaka ಮತ್ತು ಅವರ ತಂಡದ ಚಿಂತನೆ, ಸಾಹಸ ಪ್ರತಿಭೆ ನಿಜಕ್ಕೂ ಅದ್ಬುತವಾದದ್ದು. The best team work and hats off to your efforts. 35 ನಿಮಿಷಗಳ ಕಾಲ ಅವರ ವೀಡಿಯೊ ಮಂತ್ರ ಮುಗ್ದ ರನ್ನಾಗಿಸುತ್ತದೆ, ಕಾಡಿನ ಒಳ ಹೊಕ್ಕು ಅದ್ಬುತ ಚಿತ್ರಣಗಳನ್ನು ಸೆರೆ ಹಿಡಿದಿರುವ ಅವರ ಶ್ರಮ ನಿಜಕ್ಕೂ ಸಾರ್ಥಕವಾದದ್ದು.
ಅವರ ವೀಡಿಯೊ ನೋಡಿದಾಗ ಕಾಡಿನ ಉಳಿವಿಗಾಗಿ ಇಂದಿನ ಯುವ ಜನತೆಗೆ ಮಾರ್ಗ ತೋರಿದ ತೇಜಸ್ವಿ ಯವರ ಕನಸುಗಳು ಉದ್ದೇಶಗಳು ಇಂದಿನ ಯುವಜನತೆಯಲ್ಲೂ ಒಡ ಮೂಡಿರುವುದು, ಮೂಡುತ್ತಿರುವುದು ತೇಜಸ್ವಿ ಅಜರಾಮರ ಎಂಬುದನ್ನು ನೆನಪಿಸುತ್ತವೆ.

No comments:

Post a Comment